ಒಟ್ಟು 32 ಕಡೆಗಳಲ್ಲಿ , 1 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ದರಿಯಿರದೆ ಗಿರಿಯಿಲ್ಲ; ನೆರಳಿರದೆ ಬೆಳಕಿಲ್ಲ |ಮರಣವಿಲ್ಲದೆ ಜನನಜೀವನಗಳಿಲ್ಲ ||ವರಗುಣೋನ್ನತಿಗೆ ನಿಮ್ನಗುಣಂಗಳೊಡವುಟ್ಟು |ತೆರೆ ಬೀಳದೇಳುವುದೇ - ಮಂಕುತಿಮ್ಮ ||
ಧಾತ್ರಿಯನು ಮದುವೆಮಂಟಪದೊಲು ಸಿಂಗರಿಸಿ |ಕ್ಷಾತ್ರದಗ್ನಿಗಳ ನರಹೃದಯಗಳೊಳಿರಿಸಿ ||ಕೃತ್ರಿಮವನೆಡೆಬಿಡದೆ ನಡಸಿ ನಗುವ ವಿಲಾಸಿ |ಚಿತ್ರಕಾರಿಯೊ ಮಾಯೆ - ಮಂಕುತಿಮ್ಮ ||
ನಗು; ಮನದಿ ಲೋಗರ ವಿಕಾರಂಗಳನು ನೋಡಿ |ಬಿಗಿ ತುಟಿಯ; ದುಡಿವಂದು ನೋವಪಡುವಂದು ||ಪೊಗು; ವಿಶ್ವಜೀವನದ ಜೀವಾಂತರಂಗದಲಿ |ನಗುನಗುತ ಬಾಳ್; ತೆರಳು - ಮಂಕುತಿಮ್ಮ ||
ನಗುನಗುವ ಕಣ್ಗಳಿಗೆ ಹೊಗೆಯನೂದಲುಬೇಡ |ಜಗವ ಸುಡುಗಾಡೆನುವ ಕಟುತಪಸು ಬೇಡ ||ಮಗುವು ತಾಯ್ತಂದೆಕಣ್ಮುಂದೆ ನಡೆವಂತೆ ನಡೆ |ಮಿಗೆಚಿಂತೆ ತಲೆಹರಟೆ - ಮಂಕುತಿಮ್ಮ ||
ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ |ನಗುವ ಕೇಳುತ ನಗುವುದತಿಶಯದ ಧರ್ಮ ||ನಗುವ ನಗಿಸುವ ನಗಿಸಿ ನಗುತ ಬಾಳುವ ವರವ |ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ ||
ನಗುವೊಂದು ರಸಪಾಕವಳುವೊಂದು ರಸಪಾಕ |ನಗುವಾತ್ಮ ಪರಿಮಳವ ಪಸರಿಸುವ ಕುಸುಮ ||ದುಗುಡವಾತ್ಮವ ಕಡೆದು ಸತ್ತ್ವವೆತ್ತುವಮಂತು |ಬಗೆದೆರಡನುಂ ಭುಜಿಸು - ಮಂಕುತಿಮ್ಮ ||
ಮನೆಯ ತೊರೆದೋಡಲೇಂ? ವನಗುಹೆಯ ಸಾರಲೇಂ? |ತನುವನುಗ್ರವ್ರತಗಳಿಂದೆ ದಂಡಿಸಲೇಂ? ||ಬಿನದಗಲನರಸಿ ನೀನೂರೂರೊಳಲೆದೊಡೇಂ? |ಮನವ ತೊರೆದಿರಲಹುದೆ - ಮಂಕುತಿಮ್ಮ ||
ಮನೆಯೆ ಮಠವೆಂದು ತಿಳಿ; ಬಂಧು ಬಳಗವೆ ಗುರುವು |ಅನವರತಪರಿಚರ್ಯೆಯವರೊರೆವ ಪಾಠ ||ನಿನಗುಳಿದ ಜಗವ ಮುಟ್ಟಿಪ ಸೇತು ಸಂಸಾರ |ಮನಕೆ ಪುಟಸಂಸ್ಕಾರ - ಮಂಕುತಿಮ್ಮ ||
ಸಾಸಿರದ ಯುಕ್ತಿ ಸಾಹಸದ ನೀನೆಸಗುತಿರು |ಲೇಸು ಫಲ ದೊರೆಗೆ ನಿನ್ನೆಲ್ಲ ಪೌರುಷಕಂ ||ಶೇಷ ನಿನಗುಳಿವುದೆಂತಾದೊಡಂ ನೋವಿನಿತು |ಸೈಸದನು ನೀನಳದೆ - ಮಂಕುತಿಮ್ಮ ||
ಹೃದಯದಬ್ಬರವೇನು ಹೊಟ್ಟೆಯುಬ್ಬರದಂತೆ |ಅದರಿಳಿತ ಕೊರಳ ನಾಳದ ಸದ್ದಿನಿಂದ ||ಅದೆ ನಗುವು ದುಗುಡಗಳು; ಅದೆ ಹೊಗಳು ತೆಗಳುಗಳು |ಅದನಿಳಿಸೆ ಶಾಂತಿಯೆಲೊ - ಮಂಕುತಿಮ್ಮ ||