ಒಟ್ಟು 32 ಕಡೆಗಳಲ್ಲಿ , 1 ವಚನಕಾರರು , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ದ್ವೇಷರೋಷಗಳವೊಲೆ ನೇಹಮುಂ ಮೋಹಮುಂ |ಪಾಶವಾಗಲ್ಪಹುದು ನಿನಗೆ ಮೈಮರಸಿ ||ವಾಸನೆಗಳುರುಬಿ ಚಿತ್ತಜ್ವರಂಗಳ ಬಿತ್ತಿ |ಮೋಸದಲಿ ಕೊಲ್ಲುವುವೊ - ಮಂಕುತಿಮ್ಮ ||
ನರರವೊಲೆ ಸುರರುಮಲೆದಲೆದು ಮರೆಯಾಗಿಹರು |ಭರತದೇಶದೊಳಮೈಗುಪ್ತಯವನರೊಳಂ ||ಸುರ ನಾಮ ರೂಪಗಳಸಂಖ್ಯಾತ; ನಿಜವೊಂದು |ತೆರೆ ಕೋಟಿ ಕಡಲೊಂದು - ಮಂಕುತಿಮ್ಮ ||
ನರವಿವೇಕವದೇನು ಬರಿಯ ಮಳೆನೀರಲ್ಲ |ಕೆರೆಯ ನೀರ್ ಊರ ಮೈಸೋಂಕುಗಳ ಬೆರಕೆ ||ಧರೆಯ ರಸವಾಸನೆಗಳಾಗಸದ ನಿರ್ಮಲದ |ವರವ ಕದಡಾಗಿಪುವು - ಮಂಕುತಿಮ್ಮ ||
ಪುಣ್ಯಪಾಪದ ಮಿಶ್ರ ನರಜಂತುವವನ ನೆಲೆ |ಮಣ್ಣು ಕರುಳುಗಳೆಸಕವವನ ಮೈದೊಡವು ||ಬಣ್ಣಬಣ್ಣದ ವಸ್ತ್ರ; ಬಿಳ್ಪೊಡನೆ ಕಪ್ಪಿಹುದು |ಕಣ್ಣ ದುರುಗುಟಿಸದಿರು - ಮಂಕುತಿಮ್ಮ ||
ಪುರುಷಂ ಸ್ವತಂತ್ರನೋ? ದೈವವಿಧಿ ಪರವಶನೊ? |ಎರಡುಮನಿತಿನಿತುಳ್ಳ ತೋಳಿನಂತಿಹನೋ? ||ತಿರುಗುವುದು ಮಡಿಸುವುದು ತೋಳ್ ಮೈಯಕಟ್ಟಿನಲಿ |ನರನಂತು ಮಿತಶಕ್ತ - ಮಂಕುತಿಮ್ಮ ||
ಬಳಲಿ ನೆಲದಲಿ ಮಲಗಿ ಮೈಮರೆತು ನಿದ್ರಿಪನ |ಕುಲುಕಿ ಹಾಸಿಗೆಯನರಸೆನುವುದುಪಕೃತಿಯೆ? ||ಒಳಿತನೆಸಗುವೆನೆಂದು ನೆಮ್ಮದಿಯ ನುಂಗದಿರು |ಸುಲಭವಲ್ಲೊಳಿತೆಸಗೆ - ಮಂಕುತಿಮ್ಮ ||
ಬೆಟ್ಟಕ್ಕೆ ಸನ್ನೆಹಾಕಿರುವ ಮಹದಾಶಿಗನೆ |ಗಟ್ಟಿಯೇ? ಸೊಟ್ಟಾಗದೇ ಸನ್ನೆಗೋಲು? ||ರಟ್ಟೆಯೇ ಮುರಿದೀತು ಮೈಮರೆತ ಸಾಹಸದಿ |ಎಷ್ಟುಚಿತವೋ ನೋಡು - ಮಂಕುತಿಮ್ಮ ||
ಬೆರಗಾಗಿಪುವುವೆಲ್ಲ ಪಿರಿತನದ ನೋಟಗಳು |ಬೆರಗೆ; ಮೈಮರೆವೆ; ಸೊಲ್ಲಣಗುವುದೆ ಸೊಗಸು ||ಬೆರಗು ಚಿತ್ತವ ನುಂಗಲೊಗೆವ ಶಾಂತಿಯ ಕಾಂತಿ |ಪರಮನರ್ಚನೆಗೆ ವರ - ಮಂಕುತಿಮ್ಮ ||
ಬೇರಯಿಸಿ ನಿಮಿಷನಿಮಿಷಕಮೊಡಲಬಣ್ಣಗಳ |ತೋರಿಪೂಸರವಳ್ಳಿಯಂತೇನು ಬೊಮ್ಮಂ? ||ಪೂರ ಮೈದೋರೆನೆಂಬಾ ಕಪಟಿಯಂಶಾವ |ತಾರದಿಂದಾರ್ಗೇನು? - ಮಂಕುತಿಮ್ಮ ||
ಮಾಯೆಯೊಮ್ಮೊಮ್ಮೆ ತೋರುವಳು ಮಿಗಿಲಕ್ಕರೆಯ |ಮಾಯಿಪಳು ಗಾಯಗಳನೀವಳಿಷ್ಟಗಳ ||ಮೈಯ ನೀಂ ಮರೆಯೆ ನೂಕುವಳಾಗ ಪಾತಳಕೆ |ಪ್ರೇಯಪೂತನಿಯವಳು - ಮಂಕುತಿಮ್ಮ ||
ಮೆರೆಯುವುವು ನೂರಾರು ಮೈಮೆಗಳು ಸೃಷ್ಟಿಯಲಿ |ಧರಣಿಯವು; ಗಗನದವು; ಮನುಜಯತ್ನದವು ||ಪಿರಿದೆಂಬೆನವುಗಳೊಳು ಧರುಮವರಿತವನೊಲುಮೆ |ಅರಿವುಳ್ಳೊಲುಮೆ ಪಿರಿದು - ಮಂಕುತಿಮ್ಮ ||
ಸರಿಗೆಪಂಚೆಯೊ ಹೊದಕೆ; ಹರಕುಚಿಂದಿಯೊ ಮೈಗೆ |ಪರಮಾನ್ನಭೋಜನವೊ; ತಿರುಪೆಯಂಬಲಿಯೋ ||ಪರಿಣಾಮದಲಿ ಧನಿಕ ಬಡವರಿರ್ವರುಮೊಂದೆ |ಕರುಬು ಕೊರಗೇತಕೆಲೊ? - ಮಂಕುತಿಮ್ಮ ||
ಸಾಮಾನ್ಯರೂಪದಲಿ; ಸಂಸಾರಿವೇಷದಲಿ |ಸ್ವಾಮಿ ನಿನ್ನೆಡೆಗೆ ಬರಬಹುದು ವರ ನೀಡಿ ||ಮೈಮೆ ಕಾಂಬೊಡೆ ನಿನಗೆ ಸಂಸ್ಕಾರವಿರಬೇಕು |ತಾಮಸಿಗೆ ವರವೆಲ್ಲಿ? - ಮಂಕುತಿಮ್ಮ ||
ಸುಂದರತೆಯೆನುವುದೇಂ? ಜನಕೆ ಮೈಮರೆಯಿಪಾ- |ನಂದದೊಳಮರುಮವೇಂ? ವಿಶ್ವಚೇತನದಾ ||ಸ್ಪಂದನವೆ ಸೌಂದರ್ಯಮದುವೆ ಜೀವನಮೂಲ |ಬಂಧುರತೆ ಬೊಮ್ಮನದು - ಮಂಕುತಿಮ್ಮ ||
ಹಿಂದಣದರುಳಿವಿರದು; ಮುಂದಣದರುಸಿರಿರದು |ಒಂದರೆಕ್ಷಣ ತುಂಬಿ ತೋರುವುದನಂತ ||ಒಂದೆ ಕಣ್ಣೊಂದೆ ಗುರಿಯೊಂದೆ ಮೈಮನಮರೆತ |ಸುಂದರದ ಲೋಕವದು - ಮಂಕುತಿಮ್ಮ ||