ಒಟ್ಟು 27 ಕಡೆಗಳಲ್ಲಿ , 1 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಮಿತ ನಿನ್ನ ಗುಣ ಶಕ್ತಿ; ಮಿತ ನಿನ್ನ ಕರ್ತವ್ಯ |ಮಿತ ಅತಿಗಳಂತರವ ಕಾಣುವುದೆ ಕಡಿದು ||ಹಿತವೆನಿಸಿದನಿತೆಸಗು; ದೈವಕುಳಿದುದನು ಬಿಡು |ಕೃತಿಯಿರಲಿ ದೈವಕಂ - ಮಂಕುತಿಮ್ಮ ||
ಮುಕ್ತಿಯೆಂಬುದು ಮನದ ಸಂಸ್ಥಿತಿಯೆ; ಬೇರಲ್ಲ |ರಕ್ತಿ ವಿಪರೀತವದಕಾಗದಿರೆ ಮುಕ್ತಿ ||ಯುಕ್ತಿಯಿಂ ಕರಣಚೇಷ್ಟಿತವ ತಿದ್ದುತೆ ಶಮಿಪ |ಶಕ್ತಿವಂತನೆ ಮುಕ್ತ - ಮಂಕುತಿಮ್ಮ ||
ಯತನ ಕರ್ತವ್ಯವದು; ನಮಗೆ ವಿದ್ಯಾಭ್ಯಾಸ |ಹಿತಪರಿಜ್ಞಾನ ಯತ್ನಾನುಭವ ಫಲಿತ ||ಸತತಯತ್ನದಿನಾತ್ಮಶಕ್ತಿ ಪರಿವರ್ಧಿಪುದು |ಯತನ ಜೀವನಶಿಕ್ಷೆ - ಮಂಕುತಿಮ್ಮ ||
ಯುಕ್ತಿಸಾಮ್ರಾಜ್ಯದಲಿ ಭಕ್ತಿ ಬಡ ಪರದೇಶಿ |ಶಕ್ತಿ ಚತುರತೆಯುಡುಗಿ ನೀನು ಸೋತಂದು ||ಉತ್ಕ್ರಮಣದರೆಮನದಿ ದೈವವನು ಪಿಡಿದೇನು? |ಭಕ್ತಿ ರಕ್ತದಿ ಪರಿಗೆ - ಮಂಕುತಿಮ್ಮ ||
ರವಿಮಾತ್ರದಿಂದಲ್ಲ ಭುವಿಮಾತ್ರದಿಂದಲ್ಲ |ಭುವನಪೋಷಣೆಯುಭಯ ಸಹಕಾರದಿಂದ ||ವಿವಿಧ ಶಕ್ತಿರಸಂಗಳೇಕೀಭವಿಸೆ ಜೀವ |ಅವಿತರ್ಕ್ಯ ಸೂಕ್ಷ್ಮವದು - ಮಂಕುತಿಮ್ಮ ||
ವಕ್ತ್ರವುಂಟೆಲ್ಲರಿಗೆ; ವರ್ಚಸೋರೊರ್ವರಿಗೆ |ಕತ್ತಿ ಪಣ್ಯದೊಳುಂಟು; ಶಕ್ತಿ ಸಹಜದಲಿ ||ವ್ಯಕ್ತಿಪ್ರಭಾವವೀ ಲೋಕಚರಿತೆಯ ಕೀಲು |ಹಸ್ತವದು ದೈವಕೆಲೊ - ಮಂಕುತಿಮ್ಮ ||
ವಾಸನೆ ವಿವೇಚನೆಗಳೆರಡಕಂ ಸಂಘರ್ಷೆ |ಪ್ರಾಚೀನಕಂ ಪೌರುಷಕ್ಕಮಿರುವಂತೆ ||ಆಶಾವಿನಾಶಮುಂ ಧೀಶಕ್ತಿಯುದ್ಭವಮುಮ್ |ಈಶಪ್ರಸಾದದಿಂ - ಮಂಕುತಿಮ್ಮ ||
ಶಕ್ತಿ ಕರಣಕ್ಕಿರಲಿ; ರಸ ಸಂಗ್ರಹಣ ಶಕ್ತಿ |ಯುಕ್ತವದರೊಡನಿರಲಿ ಭೋಗದಿ ವಿರಕ್ತಿ ||ಶಕ್ತಿ ತನ್ನೊಳಗಿದ್ದು ರಕ್ತಮನನಾಗದನೆ |ಉತ್ತಮೋತ್ತಮ ಸುಕೃತಿ - ಮಂಕುತಿಮ್ಮ ||
ಶಕ್ತಿಮೀರ್ದ ಪರೀಕ್ಷೆಗಳನು ವಿಧಿ ನಿಯಮಿಸಿರೆ |ಯುಕ್ತಿಮೀರ್ದ ಪ್ರಶ್ನೆಗಳನು ಕೇಳುತಿರೆ ||ಚಿತ್ತವನು ತಿರುಗಿಸೊಳಗಡೆ; ನೋಡು; ನೋಡಲ್ಲಿ |ಸತ್ತ್ವದಚ್ಛಿನ್ನ ಝರಿ - ಮಂಕುತಿಮ್ಮ ||
ಸೃಷ್ಟಿಯದ್ಭುತಶಕ್ತಿಯುಳ್ಳೊರ್ವನಿರಲು ನ- |ಮ್ಮಿಷ್ಟಗಳನರಿತು ನೀಡುವುದವನಿಗರಿದೇಂ? ||ಇಷ್ಟವಾತನೊಳುದಿಸುವಂತೆ; ಚೋದಿಪುದೆಂತು? |ಕಷ್ಟ ನಮಗಿಹುದಷ್ಟೆ - ಮಂಕುತಿಮ್ಮ ||