ಒಟ್ಟು 44 ಕಡೆಗಳಲ್ಲಿ , 1 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಸೊಗಸು ಬೇಡದ ನರಪ್ರಾಣಿಯೆಲ್ಲಿಹುದಯ್ಯ? |ಮಗುವೆ; ಮುದುಕನೆ; ಪುರಾಣಿಕ ಪುರೋಹಿತರೆ? ||ಜಗದ ಕಣ್ಣಿಣಿಕದೆಡೆ ಮುಕುರದೆದುರೊಳು ನಿಂತು |ಮೊಗವ ತಿದ್ದುವರೆಲ್ಲ - ಮಂಕುತಿಮ್ಮ ||
ಸ್ಮಿತವಿರಲಿ ವದನದಲಿ; ಕಿವಿಗೆ ಕೇಳಿಸದಿರಲಿ |ಹಿತವಿರಲಿ ವಚನದಲಿ; ಋತವ ಬಿಡದಿರಲಿ ||ಮಿತವಿರಲಿ ಮನಸಿನುದ್ವೇಗದಲಿ; ಭೋಗದಲಿ |ಅತಿ ಬೇಡವೆಲ್ಲಿಯುಂ - ಮಂಕುತಿಮ್ಮ ||
ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ? |ಕಸದೊಳಗೆ ಕಸವಾಗಿ ಹೋಹನಲೆ ನೀನು? ||ಮುಸುಕಲೀ ಧರೆಯ ಮರೆವೆನ್ನನ್; ಎನ್ನುತ ಬೇಡು |ಮಿಸುಕದಿರು ಮಣ್ಣಿನಲಿ - ಮಂಕುತಿಮ್ಮ ||
ಹೇರಾಳು ಮೂಟೆಗೂಲಿಯ ಬೇಡಿ ಹೆಗಲೊಡ್ಡಿ |ಭಾರವನು ನಾಲ್ಕು ಮಾರೊಯ್ದಷ್ಟರೊಳಗೇ ||ದೂರವಿನ್ನೆಷ್ಟೆನುತಲಾತುರಿಪನ್ ಅದನಿಳಿಸೆ |ಕಾರುಬಾರುಗಳಷ್ಟೆ - ಮಂಕುತಿಮ್ಮ ||
ಹೋರು ಧೀರತೆಯಿಂದ; ಮೊಂಡುತನದಿಂ ಬೇಡ |ವೈರ ಹಗೆತನ ಬೇಡ; ಹಿರಿ ನಿಯಮವಿರಲಿ ||ವೈರಾಗ್ಯ ಕಾರುಣ್ಯ ಮೇಳನವೆ ಧೀರತನ |ಹೋರುದಾತ್ತತೆಯಿಂದ - ಮಂಕುತಿಮ್ಮ ||