ಒಟ್ಟು 32 ಕಡೆಗಳಲ್ಲಿ , 1 ವಚನಕಾರರು , 32 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಸೊಟ್ಟುಗಳ ನೆಟ್ಟಗಾಗಿಪ ಯತ್ನ ಲೋಕದಲಿ |ಸೃಷ್ಟಿಯಾದಿಯಿನಾಗುತಿಹುದು; ಫಲವೇನು? ||ಹೊಟ್ಟೆ ನೋವಿಳಿಯುತಿರೆ ರಟ್ಟೆ ನೋವೆನ್ನುವುದು |ಮಟ್ಟಸವೆ ತಿರೆಹರವು? - ಮಂಕುತಿಮ್ಮ ||
ಹೊಟ್ಟೆಯಲಿ ಹಸಿವು; ಮನದಲಿ ಮಮತೆ---ಈ ಯೆರಡು |ಗುಟ್ಟು ಕೀಲುಗಳಿಹುವು ಸೃಷ್ಟಿಯಂತ್ರದಲಿ ||ಕಟ್ಟಿಪುವು ಕೋಟೆಗಳ; ಕೀಳಿಪುವು ತಾರೆಗಳ |ಸೊಟ್ಟಾಗಿಪುವು ನಿನ್ನ - ಮಂಕುತಿಮ್ಮ ||