ಒಟ್ಟು 4119 ಕಡೆಗಳಲ್ಲಿ , 1 ವಚನಕಾರರು , 937 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಧರ್ಮನಿರ್ಣಯ ನಿನಗೆ ಜನ್ಮಜನ್ಮಾಂತರದ |ಕರ್ಮಸಂದರ್ಭದಿಂದೊಗೆವುದದನರಿತು ||ನಿರ್ಮಮದ ನಿರ್ಮಲೋತ್ಸಹದ ನೀನಾಚರಿಸೆ |ಬ್ರಹ್ಮ ಸಾಮೀಪ್ಯವೆಲೊ - ಮಂಕುತಿಮ್ಮ ||
ಧರ್ಮವೆಂಬುದದೇನು? ಕರ್ಮವೆಂಬುದದೇನು? ||ಬ್ರಹ್ಮಾಂಡಕಥೆಯೇನು? ಜೀವಿತವಿದೇನು? |ಬ್ರಹ್ಮವೆಲ್ಲಕು ಮೂಲ ಮಾಯೆ ತತ್ಕೃತಿಜಾಲ |ಬ್ರಹ್ಮವೇ ಜೀವನವೊ - ಮಂಕುತಿಮ್ಮ ||
ಧರ್ಮಸಂಕಟದಿ ಮನ ತಲ್ಲಣಿಸುತಿರುವಂದು |ನಿರ್ಮಥಿಸು ನಿನ್ನಾತ್ಮವನೆ ಮಮತೆ ಬಿಟ್ಟು ||ನಿರ್ಮಮದ ಸದ್ವಿವೇಕದ ದೀಪಕಿಂತ ನೀಂ |ನೆಮ್ಮಲಿನ್ನೇನಿಹುದೊ? - ಮಂಕುತಿಮ್ಮ ||
ಧಾತನೆಣ್ಣೆಯಗಾಣದೆಳ್ಳುಕಾಳಲೆ ನೀನು? |ಆತನೆಲ್ಲರನರೆವನ್; ಆರನುಂ ಬಿಡನು ||ಆತುರಂಗೊಳದೆ ವಿಸ್ಮೃತಿಬಡದುಪೇಕ್ಷಿಸದೆ |ಘಾತಿಸುವನೆಲ್ಲರನು - ಮಂಕುತಿಮ್ಮ ||
ಧಾತ್ರಿಯನು ಮದುವೆಮಂಟಪದೊಲು ಸಿಂಗರಿಸಿ |ಕ್ಷಾತ್ರದಗ್ನಿಗಳ ನರಹೃದಯಗಳೊಳಿರಿಸಿ ||ಕೃತ್ರಿಮವನೆಡೆಬಿಡದೆ ನಡಸಿ ನಗುವ ವಿಲಾಸಿ |ಚಿತ್ರಕಾರಿಯೊ ಮಾಯೆ - ಮಂಕುತಿಮ್ಮ ||
ಧಾರಿಣಿಯ ವಾಸಿಗಳ್ಗಿಹುದೊಂದು ಹಿತವಾರ್ತೆ |ಆರಯ್ವುದಾರ್ತರ್ ಅತ್ಯಾರ್ತರಾಪದವ ||ರೌರವಿಗೆ ಹಿತ ಮಹಾರೌರವಿಯ ಗೋಳುದನಿ |ನಾರಕದೊಳದುಪಾಯ - ಮಂಕುತಿಮ್ಮ ||
ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ |ಮೇರುವನು ಮರೆತಂದೆ ನಾರಕಕೆ ದಾರಿ ||ದೂರವಾದೊಡದೇನು? ಕಾಲು ಕುಂಟಿರಲೇನು? |ಊರ ನೆನಪೇ ಬಲವೊ - ಮಂಕುತಿಮ್ಮ ||
ಧಾರುಣೀಸುತೆಯವೊಲು ದೃಢಮನಸ್ಕರದಾರು? |ಮಾರೀಚಹರಿಣವಡ್ಡಾಡಲೇನಾಯ್ತು? ||ವಾರಿಧಿಯೊಳಡಗಿ ನಿದ್ರಿಪ ಬಾಡವವೊ ತೃಷ್ಣೆ |ಆರದನು ಕೆರಳಿಪರೊ! - ಮಂಕುತಿಮ್ಮ ||
ಧ್ವನಿತ ಪ್ರತಿಧ್ವನಿತ ಮನುಜಜೀವಿತವೆಲ್ಲ |ಕುಣಿವುದವನೆದೆ ಜಗತ್ಪ್ರಕೃತಿ ಪಾಡುವವೊಲ್ ||ಇನಿದಕೊಲವಳಲಿಗನುತಾಪ; ಸೆಣಸಿಗೆ ಬೀರ |ಘನಗರ್ಜಿತಕೆ ದೈನ್ಯ - ಮಂಕುತಿಮ್ಮ ||
ನಕ್ಷತ್ರಮಂಡಲದಿನಾಚೆಯಿಂದೊಂದು ದನಿ |ವಕ್ಷೋಗುಹಾಂತರದಿನೊಂದು ದನಿಯಿಂತೀ ||ಸಾಕ್ಷಿದ್ವಯವು ನಿನ್ನೊಳೊಂದುಗೂಡಿದೊಡದೇ |ಪ್ರೇಕ್ಷ ಪರಬೊಮ್ಮನದು - ಮಂಕುತಿಮ್ಮ ||
ನಗು; ಮನದಿ ಲೋಗರ ವಿಕಾರಂಗಳನು ನೋಡಿ |ಬಿಗಿ ತುಟಿಯ; ದುಡಿವಂದು ನೋವಪಡುವಂದು ||ಪೊಗು; ವಿಶ್ವಜೀವನದ ಜೀವಾಂತರಂಗದಲಿ |ನಗುನಗುತ ಬಾಳ್; ತೆರಳು - ಮಂಕುತಿಮ್ಮ ||
ನಗುನಗುವ ಕಣ್ಗಳಿಗೆ ಹೊಗೆಯನೂದಲುಬೇಡ |ಜಗವ ಸುಡುಗಾಡೆನುವ ಕಟುತಪಸು ಬೇಡ ||ಮಗುವು ತಾಯ್ತಂದೆಕಣ್ಮುಂದೆ ನಡೆವಂತೆ ನಡೆ |ಮಿಗೆಚಿಂತೆ ತಲೆಹರಟೆ - ಮಂಕುತಿಮ್ಮ ||
ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ |ನಗುವ ಕೇಳುತ ನಗುವುದತಿಶಯದ ಧರ್ಮ ||ನಗುವ ನಗಿಸುವ ನಗಿಸಿ ನಗುತ ಬಾಳುವ ವರವ |ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ ||
ನಗುವೊಂದು ರಸಪಾಕವಳುವೊಂದು ರಸಪಾಕ |ನಗುವಾತ್ಮ ಪರಿಮಳವ ಪಸರಿಸುವ ಕುಸುಮ ||ದುಗುಡವಾತ್ಮವ ಕಡೆದು ಸತ್ತ್ವವೆತ್ತುವಮಂತು |ಬಗೆದೆರಡನುಂ ಭುಜಿಸು - ಮಂಕುತಿಮ್ಮ ||
ನಟಿಪುದೊಮ್ಮೊಮ್ಮೆ ಮರುಕವ ದೈವ ಮನುಜರಲಿ |ಕಟುಕನಿನಿಸಕ್ಕಿಯನು ಹಕ್ಕಿಗೆರಚುವವೋಲ್ ||ತುಟಿ ಸುಟ್ಟು ರಸನೆಗೆಟುಕದ ಕೀರು ದೈವಕೃಪೆ |ತಟವಟವೊ ಸೃಷ್ಟಿದಯೆ - ಮಂಕುತಿಮ್ಮ ||