ಒಟ್ಟು 52 ಕಡೆಗಳಲ್ಲಿ , 1 ವಚನಕಾರರು , 47 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಹಿಂದಣದರುಳಿವಿರದು; ಮುಂದಣದರುಸಿರಿರದು |ಒಂದರೆಕ್ಷಣ ತುಂಬಿ ತೋರುವುದನಂತ ||ಒಂದೆ ಕಣ್ಣೊಂದೆ ಗುರಿಯೊಂದೆ ಮೈಮನಮರೆತ |ಸುಂದರದ ಲೋಕವದು - ಮಂಕುತಿಮ್ಮ ||
ಹೊರಗೆ ಹೊಳೆವೊಂದು ಹೊಳಪಿನ ಕಿರಣವೆನ್ನೆದೆಯೊ- |ಳುರಿಯನೆಬ್ಬಿಸಿ ಹೊಗೆಯನೆರಚಿ ಕಣ್ಗಳಿಗೆ ||ಕೆರಳಿಪುದು ಕರಣಗಳ; ಮರಳಿಪುದು ಹರಣಗಳ |ಹೊರಮೋಹವೊಳದಾಹ - ಮಂಕುತಿಮ್ಮ ||