ಒಟ್ಟು 54 ಕಡೆಗಳಲ್ಲಿ , 1 ವಚನಕಾರರು , 49 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಸೌಂದರ್ಯವೊಂದು ದೈವರಹಸ್ಯ; ಸೃಷ್ಟಿವೊಲು |ನಿಂದಿರ್ಪುದದರಾಶೆಯಿನೆ ಜೀವಿತಾಶೆ ||ಅಂದುವುದು ಕಣ್ಣಿಗದು ಸಂಸ್ಕೃತಿಗೆ ತಕ್ಕಂತೆ |ಚೆಂದದರಿವೆ ತಪಸ್ಸೊ - ಮಂಕುತಿಮ್ಮ ||
ಹರಿಗೆ ನಿನ್ನನುರಾಗವೆಲ್ಲವನು ಸಲ್ಲಿಸೆನೆ |ಮರುನುಡಿಯ ನುಡಿವನೇನ್ ಒಡಲ ತೋರದನು? ||ಪರಿತಪಿಸುವುದು ಜೀವ ಜೀವಸರಸವನೆಳಸಿ |ನರಧರ್ಮಸೂಕ್ಷ್ಮವಿದು - ಮಂಕುತಿಮ್ಮ ||
ಹಾಳು ಹಾಳೆಲ್ಲ ಬಾಳೆನ್ನುತಿರ್ದೊಡೆಯುಮದ- |ರೂಳಿಗವ ತಪ್ಪಿಸುವ ಜಾಣನೆಲ್ಲಿಹನು? ||ಊಳಿಗವೊ ಕಾಳಗವೊ ಕೂಳ್ಕರೆಯೊ ಗೋಳ್ಕರೆಯೊ |ಬಾಳು ಬಾಳದೆ ಬಿಡದು - ಮಂಕುತಿಮ್ಮ ||
ಹೇಳಲಾಗದ ಹಸಿವು; ತಾಳಲಾಗದ ತಪನೆ |ಆಳದಲಿ ನಾಚನಾಗಿಪ ಚಿಂತೆಯೂಟೆ ||ಗಾಳಿಯೆತ್ತೆತ್ತಣಿನೊ ತಂದೀವ ಸೋಂಕು---ಇವೆ |ಬಾಳ ಸಾಮಗ್ರಿಯಲ - ಮಂಕುತಿಮ್ಮ ||