ಒಟ್ಟು 156 ಕಡೆಗಳಲ್ಲಿ , 1 ವಚನಕಾರರು , 135 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ನಿನ್ನ ಹೆಣವನು ನೀನೆ ಹೊತ್ತು ಸಾಗಿಸಬೇಕೊ! |ಅಣ್ಣ ಬಾ ತಮ್ಮ ಬಾ ಎಂದಳುವುದೇಕೋ? ||ನಿನ್ನೊಡಲೆ ಚಿತೆ; ಜಗದ ತಂಟೆಗಳೆ ಸವುದೆಯುರಿ |ಮಣ್ಣೆ ತರ್ಪಣ ನಿನಗೆ - ಮಂಕುತಿಮ್ಮ ||
ನಿಶಿ ಹಿಂದೆ; ನಿಶಿ ಮುಂದೆ; ನಡುವೆ ಮಿಸುಕಾಟ ಬಾಳ್ |ನಿಶಿ ಕೆಲವರಿಗೆ ಸೊನ್ನೆ; ಕೆಲವರಿಗೆ ಗುಟ್ಟು ||ಮಸಕಿನಲಿ ಭೂತವೊಂದಿಹುದು ದಿಟವಾದೊಡದ- |ರುಸಿರು ಸೋಕದೆ ನಿನ್ನ? - ಮಂಕುತಿಮ್ಮ ||
ನಿಶಿಯೊಳೇಂ ಕಾಣಬಾರನು ಹಗಲನೊಲ್ಲದೊಡೆ? |ಶಶಿರವಿಗಳವನ ಮನೆಕಿಟಕಿಯಾಗಿರರೇಂ? ||ಮಸಕುಬೆಳಕೊಂದಾದ ಸಂಜೆಮಂಜೇನವನು |ಮಿಸುಕಿ ಸುಳಿಯುವ ಸಮಯ? - ಮಂಕುತಿಮ್ಮ ||
ನೀಲ ವಿಸ್ತರವಿರಲು ನಕ್ಷತ್ರ ಬಿಂದು ಸೊಗ |ಶೈಲದಚಲತೆಯಿರಲು ಝರಿಯ ವೇಗ ಸೊಗ ||ಬಾಳು ಬಯಲಂತಿರಲು ಮನೆಯಚ್ಚುಕಟ್ಟಿಂಬು |ವೈಲಕ್ಷಣದ ಚೆಂದ - ಮಂಕುತಿಮ್ಮ ||
ನೆಲದ ಬೇಸಾಯ ತಾನೊಳ್ಳಿತಾಗಿರೆ ನಿನಗೆ |ಫಲವದೆಂತಹುದೆಂಬ ಶಂಕೆಗೆಡೆಯುಂಟೆ? ||ಒಳಿತರೊಳೆ ನೀಂ ಬಾಳು; ಪರವದೆಂತಿರ್ಡೊಡೇಂ? |ಇಳೆಯೆ ಬಾಗಿಲು ಪರಕೆ - ಮಂಕುತಿಮ್ಮ ||
ನೋಡುನೋಡುತ ಲೋಕಸಹವಾಸ ಸಾಕಹುದು |ಬಾಡುತಿಹ ಹೂಮಾಲೆ; ಗೂಢವಿಹ ಕಜ್ಜಿ ||ತೋಡದಿರು ಬಾಳ್ವೆಯಾಳವನು; ಮೇಲ್ಮೇಲೆ ನೀ |ನೋಡಾಡು ಹಗುರದಿಂ - ಮಂಕುತಿಮ್ಮ ||
ಪಿರಿದೆಲ್ಲ ಮತನೀತಿಗಳಿಗಿಂತ ಜೀವಿತವು |ನೆರೆಬಂದ ನದಿ ದಡಕೆ ಬಾಗಿ ಪರಿಯುವುದೇಂ? ||ಧರುಮಸೂಕ್ಷ್ಮದ ತಿಳಿವೆ ಲೋಕಸೂತ್ರದ ಸುಳುವು |ಅರಸು ಜೀವಿತ ಹಿತವ - ಮಂಕುತಿಮ್ಮ ||
ಪೆರತೊಂದು ಬಾಳ ನೀನಾಳ್ವ ಸಾಹಸವೇಕೆ? |ಹೊರೆ ಸಾಲದೇ ನಿನಗೆ; ಪೆರರ್ಗೆ ಹೊಣೆವೋಗೆ? ||ಮರದಿ ನನೆ ನೈಜದಿಂದರಳೆ ಸೊಗವೆಲ್ಲರ್ಗೆ |ಸೆರೆಮನೆಯ ಸೇಮವೇಂ? - ಮಂಕುತಿಮ್ಮ ||
ಪೆರ್ಮೆಯ ಗುಣಂಗಳಿನ್ನೂರು ಶಾಸ್ತ್ರೋಕ್ತದವು |ಸರ್ವೋತ್ತಮಗಳೆರಡು ಸರ್ವಕಠಿನಗಳು ||ನಿರ್ಮತ್ಸರತೆಯೊಂದು ದೋಷಿಯೊಳ್ ಕ್ಷಮೆಯೊಂದು |ಬಾಹ್ಮಿಕಾಭ್ಯಾಸವದು - ಮಂಕುತಿಮ್ಮ ||
ಪ್ರತ್ಯೇಕಸುಖವಲ್ಪದುದು; ಗಳಿಗೆತೋರ್ಕೆಯದು |ಆತ್ಮವಿಸ್ತಾರವಾಗಿಪುದೆ ನಿತ್ಯಸುಖ ||ವ್ಯಕ್ತಿಜೀವನದ ಸೊಂಪು ಸಮಷ್ಟಿಜೀವನದಿ |ಒಟ್ಟು ಬಾಳ್ವುದ ಕಲಿಯೊ - ಮಂಕುತಿಮ್ಮ ||
ಫಲವೇನು ಹೆಣಗಾಡಿ ಹೋರಾಡಿ ಧರೆಯೊಳಗೆ? |ಸಲಿಸದೊಂದನುಮೊಂದನುಂ ದೈವ ಬಿಡದು ||ಹೊಲಸೆಲ್ಲವೆಲ್ಲಪಾಳ್; ಬಾಳ್ಗೆ ತಳಹದಿಯಿಲ್ಲ |ಗಲಿಬಿಲಿಯಿದೆನಬೇಡ - ಮಂಕುತಿಮ್ಮ ||
ಬಡಗಿ ಬೇಸಾಯಿ ಕರ್ಮಿಗರೇನು ಯೋಗಿಗಳೊ! |ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ||ಬಿಡುವಿರದು ಬಣಗು ಚಿಂತೆಗೆ; ಬುತ್ತಿ ಹಂಗಿರದು |ಕಡಿದಲ್ಲವರ್ಗೆ ಬಾಳ್ - ಮಂಕುತಿಮ್ಮ ||
ಬದುಕೊಂದು ಕದನವೆಂದಂಜಿ ಬಿಟ್ಟೋಡುವನು |ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ||ಎದೆಯನುಕ್ಕಾಗಿಸುತ; ಮತಿಗದೆಯ ಪಿಡಿದು ನೀ- |ನೆದುರು ನಿಲೆ ಬಿದಿಯೊಲಿವ - ಮಂಕುತಿಮ್ಮ ||
ಬಂಧನವದೇನಲ್ಲ ಜೀವಜೀವಪ್ರೇಮ |ಒಂದೆ ನಿಲೆ ಜೀವವರೆ; ಬೆರೆತರಳೆ ಪೂರ್ಣ ||ದಂದುಗವನ್ ಅರೆಗೆಯ್ದು; ಸಂತಸವನಿಮ್ಮಡಿಪ |ಬಾಂಧವ್ಯ ದೈವಕೃಪೆ - ಮಂಕುತಿಮ್ಮ ||
ಬಂಧುಬಳಗವುಮಂತಕನ ಚಮುವೊ; ಛದ್ಮಚಮು |ದಂದುಗದ ಬಾಗಿನಗಳವರ ನಲುಮೆಗಳು ||ಕುಂದಿಪ್ಪುವಾತ್ಮನನವರ್ಗಳುಪಕಾರಗಳು |ಮಂದಿಗಾಗದಿರು ಬಲಿ - ಮಂಕುತಿಮ್ಮ ||