ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಆಶೆ ಬಲೆಯನು ಬೀಸಿ; ನಿನ್ನ ತನ್ನೆಡೆಗೆಳೆದು |ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ ||ಮೈಸವರಿ ಕಾಲನೆಡವಿಸಿ; ಗುಟ್ಟಿನಲಿ ನಗುವ |ಮೋಸದಾಟವೊ ದೈವ - ಮಂಕುತಿಮ್ಮ ||
ಆಶೆ ಮಂಥರೆ; ನರವಿವೇಚನೆಯೆ ಕೈಕೇಯಿ |ಬೀಸೆ ಮನದುಸಿರು ಮತಿದೀಪವಲೆಯುವುದು ||ವಾಸನೆಗಳನುಕೂಲ ಸತ್ಯತರ್ಕತೆ ಶೂಲ |ಶೋಷಿಸಾ ವಾಸನೆಯ - ಮಂಕುತಿಮ್ಮ ||
ಆಶೆಗಳ ಕೆಣಕದಿರು; ಪಾಶಗಳ ಬಿಗಿಯದಿರು |ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ||ಬೇಸರದ ಪಾತಕಸ್ಮೃತಿಯ ಚುಚ್ಚದಿರ್; ಎನ್ನು- |ತೀಶನನು ಬೇಡುತಿರೊ - ಮಂಕುತಿಮ್ಮ ||
ಕ್ಲೇಶ ನೂರಾಗಿರೆಯುಮಾಶೆಗಳ ಪುನರುದಯ |ಬೇಸರದ ನುಡಿಯೊಳಂ ಲೇಸುಗಳ ನೆನಪು ||ಆಶೆ ಸಾಯ್ತೆಂದೊಡಂ ಚೆಲುವೆನಲು ಕಣ್ಣಲೆತ |ಮಾಸವೀ ಜೀವಗುಣ - ಮಂಕುತಿಮ್ಮ ||
ದೋಷಿಯವನಿವನು ಪಾಪಿಯೆನುತ್ತ ಗಳಹದಿರು |ಆಶೆಯೆನಿತವನು ಸಹಿಸಿದನೊ| ದಹಿಸಿದನೊ! ||ವಾಸನೆಗಳವನನೇನೆಳೆದವೋ ಬಲವೇನೊ! |ಪಾಶಬದ್ಧನು ನರನು - ಮಂಕುತಿಮ್ಮ ||
ಬಾಳು ಪಾಳೆನ್ನುವರ ಬಿಟ್ಟಿಹುದೆ ಬೆದಕಾಟ? |ತಾಳಿದರೆ ಬಾಳನಂತಹರುಮ್ ಆಶೆಯಲಿ? ||ಕಾಲವಿನ್ನಿರದಿಂತು ನಾಳೆ ನೋಡುವಮೆನುತ |ಮೇಲನೆ ನಿರೀಕ್ಷಿಪರು - ಮಂಕುತಿಮ್ಮ ||