ಒಟ್ಟು 5 ಕಡೆಗಳಲ್ಲಿ , 1 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಎಲ್ಲಕಂ ನಿನಗಿಲ್ಲ ಕರ್ತವ್ಯದಧಿಕಾರ |ಇಲ್ಲದೆಯುಮಿಲ್ಲ ನಿನಗಾ ಹೊರೆಯ ಪಾಲು ||ಸಲ್ಲಿಸಾದನಿತ; ಮಿಕ್ಕುದು ಪಾಲಿಗನ ಪಾಡು |ಒಲ್ಲನವನ್ ಅರೆನಚ್ಚ - ಮಂಕುತಿಮ್ಮ ||
ತನ್ನ ಶಕ್ತಿಯನಳೆದು; ತನ್ನ ಗುಣಗಳ ಬಗೆದು |ಸನ್ನಿವೇಶದ ಸೂಕ್ಷ್ಮವರಿತು; ಧೃತಿದಳೆದು ||ತನ್ನ ಕರ್ತವ್ಯಪರಿಧಿಯ ಮೀರದುಜ್ಜುಗಿಸೆ |ಪುಣ್ಯಶಾಲಿಯ ಪಾಡು - ಮಂಕುತಿಮ್ಮ ||
ದೊರೆತನದ ಜಟಿಲಗಳ; ಕುಟಿಲಗಳ; ಕಠಿನಗಳ |ಭರತನುಳಿಸಿದನೆ ರಾಮನ ತೀರ್ಪಿಗೆಂದು? ||ಅರಿವಿಗಿಹ ಕರ್ತವ್ಯಭಾರವನು ತಾನರಿತು |ಧುರವ ಧರಿಸಿದನವನು - ಮಂಕುತಿಮ್ಮ ||
ಮಿತ ನಿನ್ನ ಗುಣ ಶಕ್ತಿ; ಮಿತ ನಿನ್ನ ಕರ್ತವ್ಯ |ಮಿತ ಅತಿಗಳಂತರವ ಕಾಣುವುದೆ ಕಡಿದು ||ಹಿತವೆನಿಸಿದನಿತೆಸಗು; ದೈವಕುಳಿದುದನು ಬಿಡು |ಕೃತಿಯಿರಲಿ ದೈವಕಂ - ಮಂಕುತಿಮ್ಮ ||
ಯತನ ಕರ್ತವ್ಯವದು; ನಮಗೆ ವಿದ್ಯಾಭ್ಯಾಸ |ಹಿತಪರಿಜ್ಞಾನ ಯತ್ನಾನುಭವ ಫಲಿತ ||ಸತತಯತ್ನದಿನಾತ್ಮಶಕ್ತಿ ಪರಿವರ್ಧಿಪುದು |ಯತನ ಜೀವನಶಿಕ್ಷೆ - ಮಂಕುತಿಮ್ಮ ||