ಒಟ್ಟು 7 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅರ್ಥವುಂಟನುಭವಕ್ಕಾದೊಡದು ಮಿತದರ್ಥ |ಸ್ವಾರ್ಥ ಮಿತವಾದಂತೆ ವಿಸ್ತರಿಪುದರ್ಥ ||ಸಾರ್ಥಕವದಪ್ಪುದಾರ್ಷೇಯಾರ್ಥದೊಡವೆರೆಯೆ |ಪಾರ್ಥನನುಭವದಂತೆ - ಮಂಕುತಿಮ್ಮ ||
ಉರಿಯಾರಿ ಮಳೆಗರೆಯೆ ಮರಳಿ ಸಸಿಯೇಳುವುದು |ಮೆರುಗನೊಂದುವುದು ಪೊನ್ ಪುಟ ಕಾದ ಬಳಿಕ ||ನರಜೀವವಂತು ಶುಚಿಯಹುದು ದುಃಖಾಶ್ರುವಿಂ |ತರುವಾಯ ಪುನರುದಯ - ಮಂಕುತಿಮ್ಮ ||
ಒಂದಗಳು ಹೆಚ್ಚಿರದು; ಒಂದಗಳು ಕೊರೆಯಿರದು |ತಿಂದು ನಿನ್ನನ್ನಋಣ ತೀರುತಲೆ ಪಯಣ ||ಹಿಂದಾಗದೊಂದು ಚಣ; ಮುಂದಕುಂ ಕಾದಿರದು |ಸಂದ ಲೆಕ್ಕವದೆಲ್ಲ - ಮಂಕುತಿಮ್ಮ ||
ಜೀವಗತಿಗೊಂದು ರೇಖಾಲೇಖವಿರಬೇಕು |ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ ||ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ? |ಆವುದೀ ಜಗಕಾದಿ? - ಮಂಕುತಿಮ್ಮ ||
ನರನೊಂದುವೆವಹಾರಕೆರಡಾಯವೆಯ ಲೆಕ್ಕ |ಹೊರಗಣನುಭೋಗಕೊಂದೊಳನೀತಿಗೊಂದು ||ವರಮಾನ ದೇಹಕಾದೊಡೆ ಮಾನಸಕದೇನು? |ಪರಿಕಿಸಾ ಲೆಕ್ಕವನು - ಮಂಕುತಿಮ್ಮ ||
ಶರನಿಧಿಯನೀಜುವನು; ಸಮರದಲಿ ಕಾದುವನು |ಗುರಿಯೊಂದನುಳಿದು ಪೆರತೊಂದ ನೋಡುವನೆ? ||ಮರೆಯುವನು ತಾನೆಂಬುದನೆ ಮಹಾವೇಶದಲಿ |ನಿರಹಂತೆಯದು ಮೋಕ್ಷ - ಮಂಕುತಿಮ್ಮ ||
ಶುನಕ ಬೆಂಬತ್ತಿತಲ ಧರ್ಮಜನ ಕಡೆವರಂ |ನಿನಗಂತು ಸಂಗಡಿಗನೊರ್ವನೆಡೆಬಿಡದನ್ ||ಇಣಿಕಿ ನೋಡರದಾರುಮೆನ್ನುವೆಡೆ ಕಾದಿಹನು |ಅಣಕಿಗ ಮನಸ್ಸಾಕ್ಷಿ - ಮಂಕುತಿಮ್ಮ ||