ಒಟ್ಟು 3 ಕಡೆಗಳಲ್ಲಿ , 1 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ತನುವೇನು? ಮನವೇನು? ಪರಮಾಣು ಸಂಧಾನ |ಕುಣಿಸುತಿಹುದುಭಯವನು ಮೂರನೆಯದೊಂದು ||ತೃಣದ ಹಸಿರಿನ ಹುಟ್ಟು ತಾರೆಯೆಸಕದ ಗುಟ್ಟು |ದಣಿಯದದನರಸು ನೀಂ - ಮಂಕುತಿಮ್ಮ ||
ನಿಶಿ ಹಿಂದೆ; ನಿಶಿ ಮುಂದೆ; ನಡುವೆ ಮಿಸುಕಾಟ ಬಾಳ್ |ನಿಶಿ ಕೆಲವರಿಗೆ ಸೊನ್ನೆ; ಕೆಲವರಿಗೆ ಗುಟ್ಟು ||ಮಸಕಿನಲಿ ಭೂತವೊಂದಿಹುದು ದಿಟವಾದೊಡದ- |ರುಸಿರು ಸೋಕದೆ ನಿನ್ನ? - ಮಂಕುತಿಮ್ಮ ||
ಹೊಟ್ಟೆಯಲಿ ಹಸಿವು; ಮನದಲಿ ಮಮತೆ---ಈ ಯೆರಡು |ಗುಟ್ಟು ಕೀಲುಗಳಿಹುವು ಸೃಷ್ಟಿಯಂತ್ರದಲಿ ||ಕಟ್ಟಿಪುವು ಕೋಟೆಗಳ; ಕೀಳಿಪುವು ತಾರೆಗಳ |ಸೊಟ್ಟಾಗಿಪುವು ನಿನ್ನ - ಮಂಕುತಿಮ್ಮ ||