ಒಟ್ಟು 8 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಓರೊರ್ವನಿಚ್ಛೆಗುಣವೊಂದೊಂದು ಬಗೆ ಜಗದಿ |ಭಾರಮೋರೊರ್ವನಿಂಗೊಂದೊಂದು ತೆರದಿ ||ದಾರಗಳಿನವರ ವಿಧಿ ಪಿಡಿದು ಕುಣಿದಾಡಿಸಲು |ನೂರುಜಡೆಕೋಲಾಟ - ಮಂಕುತಿಮ್ಮ ||
ಕೃತ್ರಿಮವೊ ಜಗವೆಲ್ಲ | ಸತ್ಯತೆಯದೆಲ್ಲಿಹುದೊ? |ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು ||ಚತ್ರವೀ ಜಗವಿದರೊಳಾರ ಗುಣವೆಂತಹುದೊ! |ಯಾತ್ರಿಕನೆ; ಜಾಗರಿರೊ - ಮಂಕುತಿಮ್ಮ ||
ಜನಿಸಿದೆಡೆಯಿಂ ಕಡಲವರೆಗಮಡಿಯಡಿ ನೆಲದ |ಗುಣವ ಕೊಳ್ಳುತ ಕೊಡುತ ಪೊನಲು ಮಾರ್ಪಡುಗುಂ ||ಮನುಜಸಂತಾನದಲಿ ಗುಣದವತರಣವಂತು |ಗುಣಿಪುದೆಂತಾ ತೆರನ - ಮಂಕುತಿಮ್ಮ ||
ಪಂಚಕವೊ; ಪಂಚ ಪಂಚಕವೊ ಮಾಭೂತಗಳ |ಹಂಚಿಕೆಯನರಿತೇನು? ಗುಣವ ತಿಳಿದೇನು? ||ಕೊಂಚ ಕೊಂಚಗಳರಿವು ಪೂರ್ಣದರಿವಾದೀತೆ? |ಮಿಂಚಿದುದು ಪರರತತ್ತ್ವ - ಮಂಕುತಿಮ್ಮ ||
ಲಾವಣ್ಯವಾತ್ಮಗುಣವದರಿಂದೆ ಲೋಕಜನ |ದೇವವನು ಕಮನೀಯ ವಿಗ್ರಹಂಗಳಲಿ ||ಭಾವಿಸುತ ತಮ್ಮಿಷ್ಟಭೋಗಗಳನರ್ಪಿಸುವ |ಸೇವೆಯಿಂ ನಲಿಯುವರು - ಮಂಕುತಿಮ್ಮ ||
ವನಜಂತುಗಳ ಸಸ್ಯಮೂಲಿಕಾಹಾರದಿಂ |ಗುಣವನರಿತವರಾದಿವೈದ್ಯರೌಷಧದೊಳ್ ||ಒಣತರ್ಕಗಳಿನೇನು? ಜೀವನದ ವಿವಿಧರಸ- |ದನುಭವದಿ ತತ್ತ್ವವೆಲೊ - ಮಂಕುತಿಮ್ಮ ||
ಸಾಜಗುಣವೆಂದುಪೇಕ್ಷಿಪೆಯ ನಿನ್ನವಗುಣವ? |ಸಾಜವನು ಬಿಟ್ಟಲುಗದಿಹುದು ಮೃಗಕೀಟ ||ಸಾಜವಂ ಶಿಕ್ಷಿಸುತೆ ಲೋಕಸಂಸ್ಥಿತಿಗದನು |ಯೋಜಿಪುದೆ ನರಮಹಿಮೆ - ಮಂಕುತಿಮ್ಮ ||