ಒಟ್ಟು 5 ಕಡೆಗಳಲ್ಲಿ , 1 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಪರಿಮಿತವೇನಲ್ಲ ಜೀವನಕೆ ಲಭ್ಯ ಸುಖ |ಚಪಲದಿಂ ಕಣ್ಣನತ್ತಿತ್ತಲಲಸುತಿರೆ ||ಸ್ವಪರಿಸ್ಥಿತಿಯ ಧರ್ಮ ನಷ್ಟವಹುದೊಂದೆ ಫಲ |ವಿಫಲ ವಿಪರೀತಾಶೆ - ಮಂಕುತಿಮ್ಮ ||
ಜನಕಜೆಯ ದರುಶನದಿನಾಯ್ತು ರಾವಣ ಚಪಲ |ಕನಕಮೃಗದರುಶನದೆ ಜಾನಕಿಯ ಚಪಲ ||ಜನವವನ ನಿಂದಿಪುದು; ಕನಿಕರಿಪುದಾಕೆಯಲಿ |ಮನದ ಬಗೆಯರಿಯದದು - ಮಂಕುತಿಮ್ಮ ||
ತನುರುಜೆಗೆ ಪಥ್ಯಾನ್ನ; ಬಾಯ ಚಪಲಕ್ಕಲ್ಲ |ಮನದ ಶಿಕ್ಷೆಗೆ ಲೋಕ; ಮಮಕಾರಕಲ್ಲ ||ಗುಣಚರ್ಯೆ ವಿಶ್ವಸಮರಸಕೆ; ಕಾಮಿತಕಲ್ಲ |ಮುನಿವೃತ್ತಿ ಸೂತ್ರವಿದು - ಮಂಕುತಿಮ್ಮ ||
ಸುಲಭವೇನಲ್ಲ ನರಲೋಕಹಿತನಿರ್ಧಾರ |ಬಲಕೆ ನೋಳ್ವರ್ ಕೆಲರು; ಕೆಲರೆಡಕೆ ನೋಳ್ವರ್ ||ವಿಲವಿಲನೆ ಚಪಲಿಸುವ ಮನುಜಸ್ವಭಾವದಲಿ |ನೆಲೆಗೊತ್ತು ಹಿತಕೆಲ್ಲಿ? - ಮಂಕುತಿಮ್ಮ ||