ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅನ್ನವುಣುವಂದು ಕೇಳ್; ಅದನು ಬೇಯಿಸಿದ ನೀರ್ |ನಿನ್ನ ದುಡಿತದ ಬೆಮರೊ; ಪೆರರ ಕಣ್ಣೀರೋ? ||ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ |ಜೀರ್ಣಿಸದ ಋಣಶೇಷ - ಮಂಕುತಿಮ್ಮ ||
ತೃಪ್ತಿಯರಿಯದ ವಾಂಛೆ; ಜೀರ್ಣಿಸದ ಭುಕ್ತಿವೊಲು |ಗುಪ್ತದಲಿ ಕೊಳೆಯುತ್ತೆ ವಿಷಬೀಜವಾಗಿ ||ಪ್ರಾಪ್ತಿಗೊಳಿಪುದು ಜೀವಕುನ್ಮಾದತಾಪಗಳ |ಸುಪ್ತವಹುದೆಂತಿಚ್ಛೆ? - ಮಂಕುತಿಮ್ಮ ||