ಒಟ್ಟು 3 ಕಡೆಗಳಲ್ಲಿ , 1 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅನುಬಂಧ ಜೀವಜೀವಕೆ ಪುರಾಕೃತದಿಂದ |ಮನದ ರಾಗದ್ವೇಷವಾಸನೆಗಳದರಿಂ ||ತನುಕಾಂತಿ ಮೋಹ ವಿಕೃತಿಗಳುಮಾ ತೊಡಕಿನವು |ಕೊನೆಯಿರದ ಬಲೆಯೊ ಅದು - ಮಂಕುತಿಮ್ಮ ||
ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು |ಆವನಾ ಬಂಧುತೆಯ ಜಡೆಯ ಬಿಡಿಸುವನು? ||ಜೀವ ಜೀವಕೆ ನಂಟು ಜಡ ಚೇತನಕೆ ನಂಟು |ಆವುದದಕಂಟಿರದು? - ಮಂಕುತಿಮ್ಮ ||
ಕ್ಷುತ್ತುಮಮತೆಗಳು ಜೀವಕೆ ಕುಲಿಮೆಸುತ್ತಿಗೆಗಳ್ |ಉತ್ತಮವದೆನಿಪುವುವು ಕಿಟ್ಟಗಳ ಕಳೆದು ||ಚಿತ್ತಸಂಸ್ಕಾರಸಾಧನವಯ್ಯ ಸಂಸಾರ |ತತ್ತ್ವಪ್ರವೃತ್ತಂಗೆ - ಮಂಕುತಿಮ್ಮ ||