ಒಟ್ಟು 3 ಕಡೆಗಳಲ್ಲಿ , 1 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಗರುವಭಂಗವನಾಗಿಸಿದನು ಗರುಡಂಗೆ ಹರಿ |ಮುರಿಯಿಸಿದನಂತೆ ಫಲುಗುಣನ ಹೆಮ್ಮೆಯನು ||ಕರುಬುವಂ ವಿಧಿ ಸೈಸನಾರೊಳಂ ದರ್ಪವನು |ಶಿರವ ಬಾಗಿಹುದೆ ಸರಿ - ಮಂಕುತಿಮ್ಮ ||
ಗರ್ವಪಡದುಪಕಾರಿ; ದರ್ಪ ಬಿಟ್ಟಧಿಕಾರಿ |ನಿರ್ವಿಕಾರದ ನಯನದಿಂ ನೋಳ್ಪುದಾರಿ ||ಸರ್ವಧರ್ಮಾಧಾರಿ; ನಿರ್ವಾಣಸಂಚಾರಿ |ಉರ್ವರೆಗೆ ಗುರುವವನು - ಮಂಕುತಿಮ್ಮ ||
ಮನುಜಲೋಕವಿಕಾರಗಳನು ನೀನಳಿಸುವೊಡೆ |ಮನಕೊಂದು ದರ್ಪಣವ ನಿರವಿಸೆಂತಾನುಂ ||ಅನುಭವಿಪರವರಂದು ತಮ್ಮಂತರಂಗಗಳ |ಅನುಪಮಾಸಹ್ಯಗಳ - ಮಂಕುತಿಮ್ಮ ||