ಕಗ್ಗ ಸಂಚಯ alpha
  • ಡಿ.ವಿ.ಜಿ
  • ಕಗ್ಗ
  • ಸಂಶೋಧನೆ
  • ಪದಕೋಶ
  • ಸಂಪರ್ಕಿಸಿ
  • ನಮ್ಮ ಬಗ್ಗೆ
ಇದರಂತೆ : ಇದನ್ನು :

ಒಟ್ಟು 7 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತ್ಯಂತದುತ್ಕಟದ ಸನ್ನಿವೇಶಗಳ ಭರ |ಪ್ರತ್ಯಕ್ಷದರ್ಶನದಿನಲ್ಲದೆಂತಹುದು? ||ಪುಸ್ತಕದ ಚಿತ್ರದಿಂದೂಹಿಪೆಯ ಹಿಮಗಿರಿಯ |ವಿಸ್ತಾರದದ್ಭುತವ? - ಮಂಕುತಿಮ್ಮ ||
--------------
ಡಾ. ಡಿ.ವಿ.ಗುಂಡಪ್ಪ

ಆ ವಿಶ್ವರೂಪ ಸಂದರ್ಶನದಿ ಹೊಂದಿಹುವು |ಜೀವ ನಿರ್ಜೀವಗಳು; ಕ್ರಮ ಯದೃಚ್ಛೆಗಳು ||ಆವಶ್ಯ ವಶ್ಯ; ಸ್ವಾಚ್ಛಂದ್ಯ ನಿರ್ಬಂಧಗಳು |ಕೈವಲ್ಯದೃಷ್ಟಿಯದು - ಮಂಕುತಿಮ್ಮ ||

ಜಗದ ಬಂದೀಗೃಹದಿ ಬಿಗಿಯುತಿರೆ ವಿಧಿ ನಿನ್ನ |ನಿಗಮ ಸತ್ಕಲೆ ಕಾವ್ಯಗಳ ಗವಾಕ್ಷಗಳಿಂ ||ಗಗನದೊಳನಂತದರ್ಶನದೆ ಮುಕ್ತಿಯನೊಂದು |ನಗುನಗಿಸಿ ಲೋಕವನು - ಮಂಕುತಿಮ್ಮ ||

ನರಕ ತಪ್ಪಿತು ಧರ್ಮಜಂಗೆ; ದಿಟ; ಆದೊಡೇಂ? |ನರಕದರ್ಶನದುಃಖ ತಪ್ಪದಾಯಿತಲ? ||ದುರಿತತರುವಾರು ನೆಟ್ಟುದೊ; ನಿನಗಮುಂಟು ಫಲ |ಚಿರಋಣದ ಲೆಕ್ಕವದು - ಮಂಕುತಿಮ್ಮ ||

ವ್ಯರ್ಥವೀ ಜೀವನದ ಬಡಿದಾಟವೆನ್ನದಿರು |ಅರ್ಥವಹುದದು ನಿನಗೆ ಪೂರ್ಣದರ್ಶನದಿಂ ||ನರ್ತಿಪನು ಜಡಜೀವರೂಪಂಗಳಲಿ ಬೊಮ್ಮ |ಪೂರ್ತಿಯಿದನರಿಯೆ ಸೊಗ - ಮಂಕುತಿಮ್ಮ ||

ವ್ಯಸನಕಾರಣವೊಂದು ಹಸನಕಾರಣವೊಂದು |ರಸಗಳೀಯೆರಡಕಿಂತಾಳವಿನ್ನೊಂದು ||ಭೃಶವಿಶ್ವಜೀವಿತಗಭೀರತೆಯ ದರ್ಶನದ |ರಸವದದ್ಭುತಮೌನ - ಮಂಕುತಿಮ್ಮ ||

ಹಳೆಯ ಭಕ್ತಿಶ್ರದ್ಧೆಯಳಿಸಿಹೋಗಿವೆ ಮಾಸಿ |ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ ||ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ |ತಳಮಳಿಸುತಿದೆ ಲೋಕ - ಮಂಕುತಿಮ್ಮ ||

©2014 - 2020 ಕನ್ನಡ ಸಂಚಯ | ಸಾಹಿತ್ಯ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ