ಕಗ್ಗ ಸಂಚಯ alpha
  • ಡಿ.ವಿ.ಜಿ
  • ಕಗ್ಗ
  • ಸಂಶೋಧನೆ
  • ಪದಕೋಶ
  • ಸಂಪರ್ಕಿಸಿ
  • ನಮ್ಮ ಬಗ್ಗೆ
ಇದರಂತೆ : ಇದನ್ನು :

ಒಟ್ಟು 5 ಕಡೆಗಳಲ್ಲಿ , 1 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಗನ ಬಿಸಿಗವಸಾಗಿ; ಕೆರೆಗಳಾವಿಗೆಯಾಗಿ |ಜಗದುಸಿರೆ ಹೊಗೆಯಾಗಿ ಧಗಧಗಿಸುವಂದು ||ಒಗೆದೆತ್ತಣಿನೊ ರಾತ್ರಿಯಲಿ ಧರೆಗೆ ತಂಪೆರೆವ |ಮುಗಿಲವೊಲು ದೈವಕೃಪೆ - ಮಂಕುತಿಮ್ಮ ||
--------------
ಡಾ. ಡಿ.ವಿ.ಗುಂಡಪ್ಪ

ಗಾಳಿಯನು ಗುದ್ದಿದರೆ ಮೈ ನೊಯ್ವುದೊಂದೆ ಫಲ |ಮೂಲಸತ್ತ್ವವ ಮರೆತ ಸಾಹಸಗಳಂತು ||ಮೇಳವಿಸೆ ಪೌರುಷಕೆ ದೈವಕೃಪೆಯಂದು ಫಲ |ತಾಳಿ ಬಾಳಾವರೆಗೆ - ಮಂಕುತಿಮ್ಮ ||

ದೈವಕೃಪೆಯೆನುವುದೇಂ? ಪರಸತ್ತ್ವನವವೃಷ್ಟಿ |ಜೀವಗುಣ ಪಕ್ವಪಟ್ಟಂತದರ ವೇಗ ||ಭಾವಚೋದನೆಗಳಲಿ ಬಾಹ್ಯಸಾಧನೆಗಳಲಿ |ತೀವಿ ದೊರೆಕೊಳುವುದದು - ಮಂಕುತಿಮ್ಮ ||

ನಟಿಪುದೊಮ್ಮೊಮ್ಮೆ ಮರುಕವ ದೈವ ಮನುಜರಲಿ |ಕಟುಕನಿನಿಸಕ್ಕಿಯನು ಹಕ್ಕಿಗೆರಚುವವೋಲ್ ||ತುಟಿ ಸುಟ್ಟು ರಸನೆಗೆಟುಕದ ಕೀರು ದೈವಕೃಪೆ |ತಟವಟವೊ ಸೃಷ್ಟಿದಯೆ - ಮಂಕುತಿಮ್ಮ ||

ಬಂಧನವದೇನಲ್ಲ ಜೀವಜೀವಪ್ರೇಮ |ಒಂದೆ ನಿಲೆ ಜೀವವರೆ; ಬೆರೆತರಳೆ ಪೂರ್ಣ ||ದಂದುಗವನ್ ಅರೆಗೆಯ್ದು; ಸಂತಸವನಿಮ್ಮಡಿಪ |ಬಾಂಧವ್ಯ ದೈವಕೃಪೆ - ಮಂಕುತಿಮ್ಮ ||

©2014 - 2020 ಕನ್ನಡ ಸಂಚಯ | ಸಾಹಿತ್ಯ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ