ಒಟ್ಟು 5 ಕಡೆಗಳಲ್ಲಿ , 1 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕರವೆರಡದೃಷ್ಟಕ್ಕೆ : ನರನ ಪೂರ್ವಕವೊಂದು |ಪೆರತೊಂದು ನವಸೃಷ್ಟಿಸತ್ತ್ವವಾ ಬೊಗಸೆ ||ಧರಿಸಿಹುದು ಮನುಜಜೀವಿತವನದರೊತ್ತಡದೆ |ಪರಿದಾಟ ನಮಗೆಲ್ಲ - ಮಂಕುತಿಮ್ಮ ||
ದೊರೆತನದ ಜಟಿಲಗಳ; ಕುಟಿಲಗಳ; ಕಠಿನಗಳ |ಭರತನುಳಿಸಿದನೆ ರಾಮನ ತೀರ್ಪಿಗೆಂದು? ||ಅರಿವಿಗಿಹ ಕರ್ತವ್ಯಭಾರವನು ತಾನರಿತು |ಧುರವ ಧರಿಸಿದನವನು - ಮಂಕುತಿಮ್ಮ ||
ದೊರೆಯ ವೇಷವ ಧರಿಸಿ ಮರೆಯುವೆಯ ಮೀಸೆಯನು? |ತಿರುಕಹಾರುವನಾಗಿ ಮೀಸೆ ತಿರಿಚುವೆಯ? ||ಇರುವುದವನವನಿಗವನವನ ತಾಣದ ಧರ್ಮ |ಅರಿವೆ ಋತುಗತಿಯಂತೆ - ಮಂಕುತಿಮ್ಮ ||
ಧರಿಸಿರ್ಪುದಲ ಧರ್ಮ? ಧರಿಸು ಜೀವನಧುರವ |ಚರಿಸು ಲೋಕದ ಮಾರ್ಗಗಳಲಿ ಹಿತವರಿತು ||ಸರಿಪಡಿಸಿ ದಾರಿಗಳ ಕೆರೆ ತೋಪು ಸತ್ರಗಳ |ನೆರವಾಗು ಪಯಣಕ್ಕೆ - ಮಂಕುತಿಮ್ಮ ||
ಮರೆತಿಹನೆ ಬೊಮ್ಮ? ಮರೆತಿಲ್ಲ; ಮರೆತವೊಲಿಹನು |ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ ||ಅರಸಿಕೊಳುವವೊಲಿಹುದು; ದೊರೆತವೋಲ್ ತೋರೆ ಸುಖ |ದೊರೆವವರೆಗಾಯಸವೊ - ಮಂಕುತಿಮ್ಮ ||