ಒಟ್ಟು 13 ಕಡೆಗಳಲ್ಲಿ , 1 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅರುಣೋದಯಪ್ರಭೆಯ; ಗಿರಿಶೃಂಗದುನ್ನತಿಯ |ವರುಣಾಲಯಾಯತಿಯ ನಿರುಕಿಸಿದೊಡಹುದೇಂ? ||ಬೆರಗು; ಬರಿಬೆರಗು; ನುಡಿಗರಿದೆನಿಪ್ಪಾನಂದ |ಪರಮಪೂಜೆಯುಮಂತು - ಮಂಕುತಿಮ್ಮ ||
ಜಾನಪದ ಶಿಷ್ಟಿಯಲಿ; ಸಂಪತ್ಸಮಷ್ಟಿಯಲಿ |ಜ್ಞಾನಸಂಧಾನದಲಿ; ಮೌಲ್ಯ ಗಣನೆಯಲಿ ||ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |ಆನಂದ ಧರೆಗಂದು - ಮಂಕುತಿಮ್ಮ ||
ತಿಂಗಳಾರರ ದುಡಿತ ಚೆಂಗುಲಾಬಿಯ ಬೆಳೆತ |ಕಂಗೊಳಿಪುದದರ ಸಿರಿಯರೆಗಳಿಗೆಯಲರೊಳ್ ||ಪೊಂಗುವಾನಂದವದನನುಭವಿಸಿದವನ್ ಅಜನ |ಹಂಗಿಪನೆ ಕೃಪಣತೆಗೆ? - ಮಂಕುತಿಮ್ಮ ||
ದಾಸರೋ ನಾವೆಲ್ಲ ಶುನಕನಂದದಿ ಜಗದ |ವಾಸನೆಗಳೆಳೆತಕ್ಕೆ ದಿಕ್ಕುದಿಕ್ಕಿನಲಿ ||ಪಾಶಗಳು ಹೊರಗೆ; ಕೊಂಡಿಗಳು ನಮ್ಮೊಳಗಿಹುವು |ವಾಸನಾಕ್ಷಯ ಮೋಕ್ಷ - ಮಂಕುತಿಮ್ಮ ||
ಧನ್ಯ ಹೊಲೆಯರ ನಂದ; ಹಿಡಿದುದವನನು ಕನಸು |ಸ್ವರ್ಣಸಭೆಯಾ ಶೈವತಾಂಡವದ ಕನಸು ||ಅನ್ಯಚಿಂತೆಗಳನದು ಬಿಡಿಸುತವನಾತ್ಮವನು |ಚಿನ್ಮಯಕೆ ಸೇರಿಸಿತು - ಮಂಕುತಿಮ್ಮ ||
ಪರಿಪರಿಯ ರೂಪದಲಿ ಪರದೈವ ಕಣ್ಮುಂದೆ |ಚರಿಸುತಿರೆ ನರನದರ ಗುರುತನರಿಯದೆಯೆ ||ಧರೆಯದದು ತನ್ನಂದದ ಪ್ರಾಣಿಯೆಂದೆಣಿಸಿ |ತೊರೆಯುವನು ದೊರೆತುದನು - ಮಂಕುತಿಮ್ಮ ||
ಭ್ರಾಂತಿಯೋ ಸಂಪೂರ್ಣಸುಖದಾಶೆ ಬಾಹ್ಯದಲಿ |ಸಾಂತ ಲೋಕದ ಸೌಖ್ಯ; ಖಂಡಖಂಡವದು ||ಸ್ವಾಂತಕೃಷಿಯಿಂ ಬ್ರಹ್ಮವೀಕ್ಷೆ ಲಭಿಸಿರ್ದೊಡೇ- |ಕಾಂತ ಪೂರ್ಣಾನಂದ - ಮಂಕುತಿಮ್ಮ ||
ಮೋಹನಾನಂದಭೈರವಿ ಶಂಕರಾಭರಣ |ಶಾಹನ ಕುರಂಜಿ ಕೇದಾರ ಕಾಪಿಗಳ ||ಮೋಹ ಸರ್ವಸ್ವಗಳ ರಾಗಾಬ್ಧಿಯೋ ಬ್ರಹ್ಮ |ಗಾಹಿಸದರೊಳಗೆ ನೀಂ - ಮಂಕುತಿಮ್ಮ ||
ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ |ಮಾನವಂ ಪ್ರಣಯದೊಳೊ ವೀರ ವಿಜಯದೊಳೋ ||ಏನೊ ಎಂತೋ ಸಮಾಧಾನಗಳನರಸುತಿಹ |ನಾನಂದವಾತ್ಮಗುಣ - ಮಂಕುತಿಮ್ಮ ||
ಸಚ್ಚಿದಾನಂದಂಗಳಾತ್ಮ ಸ್ವಭಾವ ರಸ |ಬಚ್ಚಿಡುವುದದನು ಜೀವಿತೆಯ ಮಾಯಿಕತೆ ||ಇಕ್ಷುವೊಲ್ ಜೀವ; ಗಾಣದವೊಲ್ ಜಗನ್ಮಾಯೆ |ನಿಚ್ಚವಿಳೆಯಾಲೆಮನೆ - ಮಂಕುತಿಮ್ಮ ||
ಸತ್ಯ ಶಿವ ಸುಂದರದ ಸಚ್ಚಿದಾನಂದನದ |ಭಿತ್ತಿಯಲಿ ಬಣ್ಣಬಣ್ಣದ ಜೀವಚಿತ್ರ ||ನಿತ್ಯ ನೀನದ ನೆನೆದು ಚಿತ್ರದಲಿ ಮನವಿರಿಸೆ |ವೃತ್ತಿ ತನ್ಮಯವಹುದೊ - ಮಂಕುತಿಮ್ಮ ||
ಸುಂದರತೆಯೆನುವುದೇಂ? ಜನಕೆ ಮೈಮರೆಯಿಪಾ- |ನಂದದೊಳಮರುಮವೇಂ? ವಿಶ್ವಚೇತನದಾ ||ಸ್ಪಂದನವೆ ಸೌಂದರ್ಯಮದುವೆ ಜೀವನಮೂಲ |ಬಂಧುರತೆ ಬೊಮ್ಮನದು - ಮಂಕುತಿಮ್ಮ ||
ಹೃದಯಪುಷ್ಪಮರಂದವಾತ್ಮಕೆ ನಿಜಾನಂದ |ಉದಿಪುದಾ ರಸ ಸುಂದರದ ಕಿರಣ ಸೋಕೆ ||ಬದುಕಿನೊಳ್ ಕವಿತೆಯೊಳ್ ಕಲೆಗಳೊಳ್ ಪ್ರಕೃತಿಯೊಳ್ |ಪುದಿದಿರ್ಪ ಕಾಂತಿಯದು - ಮಂಕುತಿಮ್ಮ ||