ಕಗ್ಗ ಸಂಚಯ alpha
  • ಡಿ.ವಿ.ಜಿ
  • ಕಗ್ಗ
  • ಸಂಶೋಧನೆ
  • ಪದಕೋಶ
  • ಸಂಪರ್ಕಿಸಿ
  • ನಮ್ಮ ಬಗ್ಗೆ
ಇದರಂತೆ : ಇದನ್ನು :

ಒಟ್ಟು 4 ಕಡೆಗಳಲ್ಲಿ , 1 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರ್ಥವುಂಟನುಭವಕ್ಕಾದೊಡದು ಮಿತದರ್ಥ |ಸ್ವಾರ್ಥ ಮಿತವಾದಂತೆ ವಿಸ್ತರಿಪುದರ್ಥ ||ಸಾರ್ಥಕವದಪ್ಪುದಾರ್ಷೇಯಾರ್ಥದೊಡವೆರೆಯೆ |ಪಾರ್ಥನನುಭವದಂತೆ - ಮಂಕುತಿಮ್ಮ ||
--------------
ಡಾ. ಡಿ.ವಿ.ಗುಂಡಪ್ಪ

ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ? |ಅರಿಯುವಂ ಸೋಂಕಿಂದೆ ಬಿಸಿಲುತಣಿವುಗಳ ||ನರನುಮಂತೆಯೆ ಮನಸಿನನುಭವದಿ ಕಾಣುವನು |ಪರಸತ್ತ್ವಮಹಿಮೆಯನು - ಮಂಕುತಿಮ್ಮ ||

ತನಗಿಂತ ಹಿರಿದ; ಭುವನಕ್ಕಿಂತ ಹಿರಿದೊಂದ- |ನನುಭವದ ಹಿಂದೆ; ಸೃಷ್ಟಿಯ ನೆರಳ ಹಿಂದೆ ||ಅನುಮಿತಿಸಿ ಮನುಜನಾ ಹಿರಿದನೆಳಸುವನೆಯ್ದೆ |ಮನುಜನೊಳಹಿರಿಮೆಯದು - ಮಂಕುತಿಮ್ಮ ||

ವೇದ ಲೋಕಾಚಾರ ನಿನ್ನನುಭವದ ಯುಕ್ತಿ |ಶೋಧಿಸೀ ಮೂರನುಂ ಸಂವಾದಗೊಳಿಸು ||ಸಾಧಿತಜ್ಞಾನ ನರಸಾಧ್ಯ ಪ್ರಮಾಣವದು |ಹಾದಿ ಬೆಳಕದು ನಿನಗೆ - ಮಂಕುತಿಮ್ಮ ||

©2014 - 2020 ಕನ್ನಡ ಸಂಚಯ | ಸಾಹಿತ್ಯ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ