ಕಗ್ಗ ಸಂಚಯ alpha
  • ಡಿ.ವಿ.ಜಿ
  • ಕಗ್ಗ
  • ಸಂಶೋಧನೆ
  • ಪದಕೋಶ
  • ಸಂಪರ್ಕಿಸಿ
  • ನಮ್ಮ ಬಗ್ಗೆ
ಇದರಂತೆ : ಇದನ್ನು :

ಒಟ್ಟು 5 ಕಡೆಗಳಲ್ಲಿ , 1 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನರನರೀ ಚಿತ್ರಗಳು; ನಾಟಕದ ಪಾತ್ರಗಳು |ಪರಿಪರಿಯ ವೇಷಗಳು; ವಿವಿಧ ಭಾಷೆಗಳು ||ಬರುತಿಹುವು; ಬೆರಗೆನಿಸಿ; ಮೆರೆಯುವುವು; ತೆರಳುವುವು |ಮೆರೆವಣಿಗೆಯೋ ಲೋಕ - ಮಂಕುತಿಮ್ಮ ||
--------------
ಡಾ. ಡಿ.ವಿ.ಗುಂಡಪ್ಪ

ನಾಟಕದೊಳನುವಿಂದ ಬೆರೆತದನು ಮೆಚ್ಚೆನಿಸಿ |ನೋಟಕನುಮಾಗಿ ತಾಂ ನಲಿದು ನಲಿಯಿಸುವಾ ||ಪಾಠವನು ಕಲಿತವನೆ ಬಾಳನಾಳುವ ಯೋಗಿ |ಆಟಕಂ ನಯವುಂಟು - ಮಂಕುತಿಮ್ಮ ||

ಬಹಿರಂತರಗಳೊಂದು ಭೂತಭವ್ಯಗಳೊಂದು |ಇಹಪರಂಗಳುಮೊಂದು ಚೈತನ್ಯವೊಂದು ||ಬಹುಪಾತ್ರನಾಟಕದಿ ಮಾಯೆ ಶತವೇಷಗಳ |ವಹಿಸಲೀವಳು ಪತಿಗೆ - ಮಂಕುತಿಮ್ಮ ||

ವಹಿಸು ಕೆಲ ಭಾರಗಳ; ಸಹಿಸು ಕೆಲ ನೋವುಗಳ |ಪ್ರಹರಿಸರಿಗಳನನಿತು ಯುಕ್ತಗಳನರಿತು ||ಮಹಿಯ ನಾಟಕದಿ ನೀಂ ಮನಸಿಟ್ಟು ಕುಣಿಕುಣಿದು |ವಿಹರಿಸಾತ್ಮಾಲಯದಿ - ಮಂಕುತಿಮ್ಮ ||

ಸಿರಿ ಸೊಬಗುಗಳ ಬೆದಕು; ಕೆಳೆ ಬಲುಮೆಗಳ ಬೆದಕು |ಪರಬೊಮ್ಮ ನಾಟಕದ ವೇಷಚೇಷ್ಟೆಗಳು ||ಅರಸುತಿಹ ಜೀವ ನಾಯಕನು; ನಾಯಕಿಯವನ |ಕೆರಳಿಸುವ ಮೋಹರುಚಿ - ಮಂಕುತಿಮ್ಮ ||

©2014 - 2020 ಕನ್ನಡ ಸಂಚಯ | ಸಾಹಿತ್ಯ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ