ಒಟ್ಟು 4 ಕಡೆಗಳಲ್ಲಿ , 1 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ನರರವೊಲೆ ಸುರರುಮಲೆದಲೆದು ಮರೆಯಾಗಿಹರು |ಭರತದೇಶದೊಳಮೈಗುಪ್ತಯವನರೊಳಂ ||ಸುರ ನಾಮ ರೂಪಗಳಸಂಖ್ಯಾತ; ನಿಜವೊಂದು |ತೆರೆ ಕೋಟಿ ಕಡಲೊಂದು - ಮಂಕುತಿಮ್ಮ ||
ನಶ್ವರಾಕೃತಿ ನಾಮಮಯ ವಿಶ್ವವಾರ್ಧಿಯಿದು |ಶಾಶ್ವತಬ್ರಹ್ಮದುಚ್ಛ್ವಾಸ ಘನ ಬಿಂದು ||ನಿಶ್ವಸಿತದಲೆಗಳನೆ ಪಿಡಿದು ಗುರಿಯರಿತೀಜೆ |ವಿಶ್ವಮೂಲಾಪ್ತಿಯಲ - ಮಂಕುತಿಮ್ಮ ||
ಪುಲಿ ಸಿಂಗದುಚ್ಛ್ವಾಸ; ಹಸು ಹುಲ್ಲೆ ಹಯದುಸಿರು |ಹುಳು ಹಾವಿಲಿಯ ಸುಯ್ಲು; ಹಕ್ಕಿ ಹದ್ದುಯ್ಲು ||ಕಲೆತಿರ್ಪುವೀಯೆಲ್ಲ ನಾಮುಸಿರ್ವೆಲರಿನಲಿ |ಕಲಬೆರಕೆ ಜಗದುಸಿರು - ಮಂಕುತಿಮ್ಮ ||
ರಾಮನಡಿಯಿಟ್ಟ ನೆಲ; ಭೀಮನುಸಿರಿದ ಗಾಳಿ |ವ್ಯೋಮದೆ ಭಗೀರಥಂ ತಂದ ಸುರತಟಿನಿ |ಸೋಮನಂ ಪೆತ್ತ ಕಡಲೀ ಪುರಾತನಗಳಿರೆ |ನಾಮೆಂತು ಹೊಸಬರೆಲೊ - ಮಂಕುತಿಮ್ಮ ||