ಒಟ್ಟು 13 ಕಡೆಗಳಲ್ಲಿ , 1 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಆವ ಕಡೆ ಹಾರುವುದೊ! ಆವ ಕಡೆ ತಿರುಗುವುದೊ! |ಆವಾಗಳಾವಕಡೆಗೆರಗುವುದೊ ಹಕ್ಕಿ! ||ನಾವುಮಂತೆಯೆ ಸೃಷ್ಟಿಕೃತ್ರಿಮದ ಕೈಗೊಂಬೆ |ಜೀವಮಾರ್ಗವನೂಹ್ಯ - ಮಂಕುತಿಮ್ಮ ||
ಒಟ್ಟಿನಲಿ ತತ್ತ್ವವಿದು : ವಿಕಟರಸಿಕನೊ ಧಾತ |ತೊಟ್ಟಿಲನು ತೂಗುವನು; ಮಗುವ ಜಿಗಟುವನು ||ಸಿಟ್ಟನ್ ಒಡವುಟ್ಟುಗಳೊಳಾಗಿಪನು; ಸೋಲಿಪನು |ತುತ್ತು ವಿಕಟಿಗೆ ನಾವು - ಮಂಕುತಿಮ್ಮ ||
ಕಡಿದೊಡೆ ಪರೀಕ್ಷೆಗುಳಿವುವು ಸತ್ತನಾರುಗಳು |ಕಡಿಯದಿರೆ ಮರದಿ ಪರಿಯುವುದು ಜೀವರಸ ||ಬಿಡುವಮ್ ಈ ಬಾಳ್ ಅದೇಕೆಂಬ ಚರ್ಚೆಯ; ನಾವು |ದುಡಿವಮ್ ಅದು ಪೆಂಪುಗೊಳೆ - ಮಂಕುತಿಮ್ಮ ||
ಜೀವಋಣಗಳ ಲೆಕ್ಕದಾದಿಯರಿಯದ ನಾವು |ಆವುದನು ಸರಿಯೆನುವ? ತಪ್ಪಾವುದೆನುವ? ||ಓವೊ ಬಿಡು ಕಡುಕಷ್ಟ ನೀತಿನಿರ್ಣಯದ ಹೊರೆ |ದೈವವದ ಹೊರಲಿ ಬಿಡು - ಮಂಕುತಿಮ್ಮ ||
ಧರೆಯೆ ಕೋಸಲ; ಪರಬ್ರಹ್ಮನೇ ರಘುವರನು |ಭರತನವೊಲನುಪಾಲನಕ್ರಿಯರು ನಾವು ||ಅರಸನೂಳಿಗ ನಮ್ಮ ಸಂಸಾರದಾಡಳಿತ |ಹರುಷದಿ ಸೇವಿಸೆಲೊ - ಮಂಕುತಿಮ್ಮ ||
ನಾವುಣ್ಣುವನ್ನಗಳು ನಾವು ಕುಡಿವುದಕಗಳು |ನಾವುಸಿರುವೆಲರುಗಳು ನಾವುಡುವ ವಸ್ತ್ರ ||ಭೂವ್ಯೋಮಗಳ ಯಂತ್ರ ಸಂಘದುತ್ಪನ್ನಗಳು |ಜೀವವೆರಡರ ಶಿಶುವು - ಮಂಕುತಿಮ್ಮ ||
ಪಾತಕಿಯೊಳಾಗ್ರಹವ ತೋರೆ ನಿರ್ಮಲನಾರು? |ಆತುಮದ ಪರಿಕಥೆಯನರಿತವರೆ ನಾವು? ||ಸೋತ ದುರ್ಬಲಿಗೆ ಸಲ್ಲುವುದು ನಮ್ಮನುಕಂಪೆ |ನೀತಿ ನಿಂದೆಯೊಳಿರದು - ಮಂಕುತಿಮ್ಮ ||
ಯಾತ್ರಿಕರು ನಾವು; ದಿವ್ಯಕ್ಷೇತ್ರವೀ ಲೋಕ |ಸತ್ರದಲಿ ನೇಮದಿಂದಿರಲಿಕೆಡೆಯುಂಟು ||ರಾತ್ರಿ ಮೂರಾಯ್ತು ಹೊರಡೆನೆ ತೆರಳಿದೊಡೆ; ಪಾರು- |ಪತ್ಯದವ ಮೆಚ್ಚುವನು - ಮಂಕುತಿಮ್ಮ ||
ಸೌಂದರ್ಯದೊಳ್ ದ್ವಂದ್ವ; ಬಾಂಧವ್ಯದೊಳ್ ದ್ವಂದ್ವ |ದ್ವಂದ್ವವೀ ಲೋಕ ಸಹವಾಸಗಳೊಳೆಲ್ಲ ||ಮುಂದೆ ನೀನಾವುಭಯಗಳ ದಾಟಿ ಸಾಗುತಿರೆ |ಬಂಧಮೋಚನ ನಿನಗೆ - ಮಂಕುತಿಮ್ಮ ||
ಹೆಸರನರಿಯದ ಸಸಿಯೊಳಿರವೆ ರಸಗಂಧಗಳು? |ಬಿಸಿಲದನು ಪಕ್ವಗೊಳಿಸುತೆ ಬಿಡಿಸದಿಹುದೆ? ||ಪಸರಿಸದೆ ಗಾಳಿಯದನೊಯ್ದು ದಿಸೆದಿಸೆಗಳೊಳು? |ಉಸಿರುತಿಹೆವದ ನಾವು - ಮಂಕುತಿಮ್ಮ ||