ಒಟ್ಟು 4 ಕಡೆಗಳಲ್ಲಿ , 1 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಜೀವಿಸಂಘವಿದೇನು? ಗಂಜೀಫಿನೆಲೆಕಟ್ಟು |ದೈವ ಪೌರುಷ ಪೂರ್ವವಾಸನೆಗಳೆಂಬಾ ||ಮೂವರದನಾಡುವರು; ಚದರಿಸುತೆ; ಬೆರಸಿಡುತೆ |ನಾವೆಲ್ಲರಾಟದೆಲೆ - ಮಂಕುತಿಮ್ಮ ||
ದಾಸರೋ ನಾವೆಲ್ಲ ಶುನಕನಂದದಿ ಜಗದ |ವಾಸನೆಗಳೆಳೆತಕ್ಕೆ ದಿಕ್ಕುದಿಕ್ಕಿನಲಿ ||ಪಾಶಗಳು ಹೊರಗೆ; ಕೊಂಡಿಗಳು ನಮ್ಮೊಳಗಿಹುವು |ವಾಸನಾಕ್ಷಯ ಮೋಕ್ಷ - ಮಂಕುತಿಮ್ಮ ||
ಪಂಚಭೂತಗಳಂತೆ; ಪಂಚೇಂದ್ರಿಯಗಳಂತೆ |ಪಂಚವೇಕೆ? ಚತುಷ್ಕ ಷಟ್ಕವೇಕಲ್ಲ? ||ಹೊಂಚುತಿಹನಂತೆ ವಿಭು; ಸಂಚವನದೇನಿಹುದೊ |ವಂಚಿತರು ನಾವೆಲ್ಲ - ಮಂಕುತಿಮ್ಮ ||
ಮಾಯೆಯೆಂಬಳ ಸೃಜಿಸಿ; ತಾಯನಾಗಿಸಿ ಜಗಕೆ |ಆಯಸಂಗೊಳುತ ಸಂಸಾರಿಯಾಗಿರುವಾ ||ನಾಯಕ ಬ್ರಹ್ಮನ್ ಅನುಯಾಯಿಗಳು ನಾವೆಲ್ಲ |ಹೇಯವದರೊಳಗೇನೊ - ಮಂಕುತಿಮ್ಮ ||