ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಒರ್ವ ನಾನೆಂದು ನೀನೆಂತು ತಿಳಿಯುವೆ ಜಗದಿ? |ನೂರ್ವರಣಗಿಹರು ನಿನ್ನಾತ್ಮಕೋಶದಲಿ ||ಪೂರ್ವಿಕರು; ಜತೆಯವರು; ಬಂಧುಸಖಶತ್ರುಗಳು |ಸರ್ವರಿಂ ನಿನ್ನ ಗುಣ - ಮಂಕುತಿಮ್ಮ ||
ಕಣ್ಣಿರದೆ ರವಿಯೇನು? ರವಿಯಿರದೆ ಕಣ್ಣೇನು? |ಅನ್ಯೋನ್ಯ ಸಹಕೃತಿಯಿನುಭಯ ಸಾರ್ಥಕತೆ ||ನಿನ್ನಾತ್ಮ ಜಗದಾತ್ಮಕಂತು ಸಂಬಂಧವವು |ವಹ್ನಿಸ್ಫುಲಿಂಗಗಳೊ - ಮಂಕುತಿಮ್ಮ ||
ಕಿಡಿ ಸಣ್ಣದನು ಮೇಲೆ ಬಿದ್ದ ಕೊರಡಾರಿಪುದು |ಸುಡುವುದಾ ಕಿಡಿಯುರಿಯೆ ನೂರು ಕೊರಡುಗಳ ||ಉಡುಗಿ ನಿನ್ನಾತ್ಮವಿರೆ ಬಿಡು ಹೆಗ್ಗೆಲಸಗಳನು |ತೊಡಗಾತ್ಮ ಬಲಿತಂದು - ಮಂಕುತಿಮ್ಮ ||
ಕೊಳದಿ ನೀಂ ಮೀವಂದು ತೆರೆಯೆದ್ದು ಹರಡುತ್ತೆ |ವಲಯವಲಯಗಳಾಗಿ ಸಾರುವುದು ದಡಕೆ ||ಅಲೆಗಳಾ ತೆರದಿ ನಿನ್ನಾತ್ಮದಿಂ ಪರಿಪರಿದು |ಕಲೆತುಕೊಳ್ಳಲಿ ಜಗದಿ - ಮಂಕುತಿಮ್ಮ ||
ಧರ್ಮಸಂಕಟದಿ ಮನ ತಲ್ಲಣಿಸುತಿರುವಂದು |ನಿರ್ಮಥಿಸು ನಿನ್ನಾತ್ಮವನೆ ಮಮತೆ ಬಿಟ್ಟು ||ನಿರ್ಮಮದ ಸದ್ವಿವೇಕದ ದೀಪಕಿಂತ ನೀಂ |ನೆಮ್ಮಲಿನ್ನೇನಿಹುದೊ? - ಮಂಕುತಿಮ್ಮ ||
ಪ್ರತ್ಯೇಕ ಸುಖವ; ನೀಂ ಪ್ರತ್ಯೇಕ ಸಂಪದವ- |ನತ್ಯಾಶೆಯಿಂದರಸಿ ಮಿಕ್ಕೆಲ್ಲ ಜಗವ- ||ನೊತ್ತಟ್ಟಿಗಿಡುವೆನೆನೆ; ನಷ್ಟವಾರಿಗೊ ಮರುಳೆ? |ಬತ್ತುವುದು ನಿನ್ನಾತ್ಮ - ಮಂಕುತಿಮ್ಮ ||