ಒಟ್ಟು 3 ಕಡೆಗಳಲ್ಲಿ , 1 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಡಿಜಾರಿ ಬೀಳುವುದು; ತಡವಿಕೊಂಡೇಳುವುದು |ಕಡುಬ ನುಂಗುವುದು; ಕಹಿಮದ್ದ ಕುಡಿಯುವುದು ||ದುಡುಕಿ ಮತಿದಪ್ಪುವುದು; ತಪ್ಪನೊಪ್ಪೆನ್ನುವುದು |ಬದುಕೆಂಬುದಿದು ತಾನೆ? - ಮಂಕುತಿಮ್ಮ ||
ಏನಾದೊಡೇನು? ನೀನೆಲ್ಲಿ ಪೋದೊಡಮೇನು? |ಪ್ರಾಣವೇಂ ಮಾನವೇನಭ್ಯುದಯವೇನು? ||ಮಾನವಾತೀತವೊಂದೆಲ್ಲವನು ನುಂಗುವುದು |ಜಾನಿಸದನಾವಗಂ - ಮಂಕುತಿಮ್ಮ ||
ಮಿಡಿಚೇಪೆಕಾಯಿಗಳ ತಡಬಡದೆ ನುಂಗುವುದು |ಕಡಿಮೆ ಹೊಟ್ಟೆಯಲಿ ಹರಳೆಣ್ಣೆ ಕುಡಿಯುವುದು ||ಬಿಡುತಿರಲು ನೋವಾಗ ಸುಖವೀಗಳೆನ್ನುವುದು |ಪೊಡವಿಗಿದೆ ಭೋಗವಿಧಿ - ಮಂಕುತಿಮ್ಮ ||