ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ನರಕ ತಪ್ಪಿತು ಧರ್ಮಜಂಗೆ; ದಿಟ; ಆದೊಡೇಂ? |ನರಕದರ್ಶನದುಃಖ ತಪ್ಪದಾಯಿತಲ? ||ದುರಿತತರುವಾರು ನೆಟ್ಟುದೊ; ನಿನಗಮುಂಟು ಫಲ |ಚಿರಋಣದ ಲೆಕ್ಕವದು - ಮಂಕುತಿಮ್ಮ ||
ಮಾವುಸಸಿಯನು ನೆಟ್ಟು ಬೇವುಣಲು ಸಿದ್ಧನಿರು |ಭೂವಿಷಯದಿಂದ ರಸ ಮಾರ್ಪಡುವುದುಂಟು ||ಆ ವಿವರ ನಿನಗೇಕೆ? ತೋಟದೊಡೆಯನಿಗಿರಲಿ |ಸೇವಕನು ನೀನಲ್ತೆ? - ಮಂಕುತಿಮ್ಮ ||