ಒಟ್ಟು 5 ಕಡೆಗಳಲ್ಲಿ , 1 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕಡಲ್ಗಳೊಂದಾದೊಡಂ; ಪೊಡವಿ ಹಬೆಯಾದೊಡಂ |ಬಿಡದಿರೊಳನೆಮ್ಮದಿಯ; ಬಿಡು ಗಾಬರಿಕೆಯ ||ಕಡಲ ನೆರೆ ತಗ್ಗುವುದು; ಪೊಡವಿ ಧೂಳಿಳಿಯುವುದು |ಗಡುವಿರುವುದೆಲ್ಲಕಂ - ಮಂಕುತಿಮ್ಮ ||
ಗುಡಿಯ ಪೂಜೆಯೊ; ಕಥೆಯೊ; ಸೊಗಸುನೋಟವೊ; ಹಾಡೊ |ಬಡವರಿಂಗುಪಕೃತಿಯೊ; ಆವುದೋ ಮನದ ||ಬಡಿದಾಟವನು ನಿಲಿಸಿ ನೆಮ್ಮದಿಯನೀವೊಡದೆ |ಬಿಡುಗಡೆಯೊ ಜೀವಕ್ಕೆ - ಮಂಕುತಿಮ್ಮ ||
ಗುಡಿಸಿಲೇನೊಣಹುಲ್ಲು ಕಡ್ಡಿ ಮಣ್ಣೆನ್ನುತಲಿ |ಬಡವನಲಿ ಕೊರತೆಗಳ ನೆಡುವುದರಿದಲ್ಲ ||ಕೆಡಿಸಿದಾ ಗುಡಿಸಿಲಿನ ನೆಮ್ಮದಿಯ ಮತ್ತೆಂತು |ಕೊಡಲಹುದವಂಗೆ ನೀಂ? - ಮಂಕುತಿಮ್ಮ ||
ತಮ್ಮೆಲ್ಲ ಹಸಿವುಗಳ ತಣಿಯಿಪನಿತನ್ಯೋನ್ಯ |ಹೊಮ್ಮುಗೌದಾರ್ಯ ಜನಜನಪದಂಗಳಲಿ ||ಬೊಮ್ಮನೆಲ್ಲರನಾಳ್ವನಿಹನೆನುವ ನೆನಪಿನಲಿ |ನೆಮ್ಮದಿಯ ಪಡೆಗೆ ಜಗ - ಮಂಕುತಿಮ್ಮ ||
ಬಳಲಿ ನೆಲದಲಿ ಮಲಗಿ ಮೈಮರೆತು ನಿದ್ರಿಪನ |ಕುಲುಕಿ ಹಾಸಿಗೆಯನರಸೆನುವುದುಪಕೃತಿಯೆ? ||ಒಳಿತನೆಸಗುವೆನೆಂದು ನೆಮ್ಮದಿಯ ನುಂಗದಿರು |ಸುಲಭವಲ್ಲೊಳಿತೆಸಗೆ - ಮಂಕುತಿಮ್ಮ ||