ಒಟ್ಟು 21 ಕಡೆಗಳಲ್ಲಿ , 1 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ |ತಿಳಿನೀರು ಚಿಲುಮೆಯಲಿ ನಿಲದುಕ್ಕುವಂತೆ ||ಎಳೆ ಮಕ್ಕಳೊಳು ತಿಳಿವು ಮೊಳೆತು ಬೆಳೆವುದು ನೋಡು |ಇಳೆಯೊಳಗೊಂದು ಸೊಗ - ಮಂಕುತಿಮ್ಮ ||
ಕಣ್ಣೆರೆದು ನೋಡು; ಚಿತ್ಸತ್ತ್ವಮೂರ್ತಿಯ ನೃತ್ಯ |ಕಣ್ಮುಚ್ಚಿನೋಡು; ನಿಶ್ಚಲ ಶುದ್ಧಸತ್ತ್ವ ||ಉನ್ಮುಖನು ನೀನೆರಡು ಜಗಕಮಿರುತಿರಲಾಗ |ಹೃನ್ಮಧ್ಯದಲಿ ಶಾಂತಿ - ಮಂಕುತಿಮ್ಮ ||
ಕಾಡುಹಕ್ಕಿ ಹುಳಕ್ಕೆ ವರ್ಣಚಿತ್ರಗಳೇಕೆ? |ನೋಡುವರ ಕಣ್ಣೊಲವ ಬೇಡುವಳೆ ಸೃಷ್ಟಿ? ||ಮಾಡುವಾ ಮಾಟಗಳನಾದನಿತು ಬೆಳಗಿಪುದು |ರೂಢಿಯಾ ಪ್ರಕೃತಿಯದು - ಮಂಕುತಿಮ್ಮ ||
ಕಾಯಮಾತ್ರದುದಲ್ಲವಾತ್ಮಮಾತ್ರದುದಲ್ಲ- |ವಾಯೆರಡುಮೊಂದಾಗಲದು ಜೀವಲೀಲೆ ||ತಾಯಿವೊಲು ನಿನಗಾತ್ಮ; ಮಡದಿವೊಲು ಕಾಯವವ- |ರಾಯವನು ಸರಿನೋಡು - ಮಂಕುತಿಮ್ಮ ||
ಕುದಿ ಹೆಚ್ಚೆ ವೆಗಟ ಹುದು; ಕಡಮೆಯಿರೆ ಹಸಿನಾತ |ಕದಡಲೊಡೆವುದು ಹಾಲು; ಸೂಕ್ಷ್ಮವದರ ಹದ ||ಅದರವೊಲೆ ಮನದ ಹದ; ಅದನೆಚ್ಚರದಿ ನೋಡು |ಬದುಕು ಸೊಗ ಹದದಿಂದ - ಮಂಕುತಿಮ್ಮ ||
ಕೋಡುಗಲ್ಲನು ಹತ್ತಿ ದೂರವನು ನೋಳ್ಪಂಗೆ |ಗೋಡೆಗೊತ್ತುಗಳೇನು? ಮೇಡು ಕುಳಿಯೇನು? ||ನೋಡು ನೀನುನ್ನತದಿ ನಿಂತು ಜನಜೀವಿತವ |ಮಾಡುದಾರದ ಮನವ - ಮಂಕುತಿಮ್ಮ ||
ಜಗದ ಸೊಗದರಸಿಕೆಯ ಫಲ; ನೋಡು; ಬರಿಕಲಹ |ಮೃಗಗಳಾವೇಶಗೊಳಲಪ್ಪುದಿನ್ನೇನು? ||ಮುಗಿಯುವುದು ಕಾಳ್ಗಿಚ್ಚು ವನ ಬೂದಿಯಾದಂದು |ಹಗೆತನವುಮಂತು ಬಿಡು - ಮಂಕುತಿಮ್ಮ ||
ತನ್ನ ಮನದಾಟಗಳ ತಾನೆ ನೋಡುತ ನಗುವ |ತನ್ನೊಳಗೆ ತಾನಿರ್ವರಾದವೊಲು ಬಾಳ್ವ ||ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ |ಧನ್ಯತೆಯ ಕಂಡವನು - ಮಂಕುತಿಮ್ಮ ||
ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ? |ದಿನಪನದೆ? ಚಂದ್ರನದೆ? ನೀರಿನದೆ? ನಿನದೆ? ||ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು |ಗುಣಕೆ ಕಾರಣವೊಂದೆ? - ಮಂಕುತಿಮ್ಮ ||
ನಾಟಕವ ನೋಡು ಬ್ರಹ್ಮಾಂಡರಂಗಸ್ಥಲದಿ |ಕೋಟಿ ನಟರಾಂತಿಹರು ಚಿತ್ರಪಾತ್ರಗಳ ||ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ |ನೋಟಕರು ಮಾಟಕರೆ - ಮಂಕುತಿಮ್ಮ ||
ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ |ಕಳೆವುವದರಲಿ ನಮ್ಮ ಜನುಮಜನುಮಗಳು ||ಗೆಲವಾರ್ಗೊ! ಸೋಲಾರ್ಗೊ! ಲೆಕ್ಕನೋಡುವುದೆಂದೊ |ಫಲವು ಬರಿಯಾಟವೆಲೊ - ಮಂಕುತಿಮ್ಮ ||
ನೋಡುನೋಡುತ ಲೋಕಸಹವಾಸ ಸಾಕಹುದು |ಬಾಡುತಿಹ ಹೂಮಾಲೆ; ಗೂಢವಿಹ ಕಜ್ಜಿ ||ತೋಡದಿರು ಬಾಳ್ವೆಯಾಳವನು; ಮೇಲ್ಮೇಲೆ ನೀ |ನೋಡಾಡು ಹಗುರದಿಂ - ಮಂಕುತಿಮ್ಮ ||
ಪರಮಪದದಲಿ ನೋಡು : ಬೇರುಗಳ್ ವ್ಯೋಮದಲಿ |ಧರೆಗಿಳಿದ ಕೊಂಬುರಂಬೆಗಳು; ಬಿಳಲುಗಳು ||ಚಿರಂಜೀವಿವೃಕ್ಷವಿದು ವಿಶ್ವಜೀವಾಶ್ವತ್ಥ |ಪರಿಕಿಸಿದರರ್ಥವನು - ಮಂಕುತಿಮ್ಮ ||
ಬಾಳು ಪಾಳೆನ್ನುವರ ಬಿಟ್ಟಿಹುದೆ ಬೆದಕಾಟ? |ತಾಳಿದರೆ ಬಾಳನಂತಹರುಮ್ ಆಶೆಯಲಿ? ||ಕಾಲವಿನ್ನಿರದಿಂತು ನಾಳೆ ನೋಡುವಮೆನುತ |ಮೇಲನೆ ನಿರೀಕ್ಷಿಪರು - ಮಂಕುತಿಮ್ಮ ||
ಬೆಟ್ಟಕ್ಕೆ ಸನ್ನೆಹಾಕಿರುವ ಮಹದಾಶಿಗನೆ |ಗಟ್ಟಿಯೇ? ಸೊಟ್ಟಾಗದೇ ಸನ್ನೆಗೋಲು? ||ರಟ್ಟೆಯೇ ಮುರಿದೀತು ಮೈಮರೆತ ಸಾಹಸದಿ |ಎಷ್ಟುಚಿತವೋ ನೋಡು - ಮಂಕುತಿಮ್ಮ ||