ಒಟ್ಟು 5 ಕಡೆಗಳಲ್ಲಿ , 1 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅರೆಗಳಿಗೆಯನುಭವವೆ ಮಾನಸವ ಕರಗಿಸದೆ? |ಪರಿಪಕ್ವಗೊಳಿಸದೇನದು ಜೀವರಸವ? ||ಉರಿ ತಣಿಪುಗಳಿನಾತ್ಮಸಂಸ್ಕಾರಗಳನೆಸಪ |ಪುರುಳ ಪುಸಿಯೆನ್ನುವೆಯ? - ಮಂಕುತಿಮ್ಮ ||
ಕೆಟ್ಟ ಪ್ರಪಂಚವಿದು; ಸುಟ್ಟ ಕರಿ ನರಮನಸು |ಬಿಟ್ಟುಬಿಡಲರಿದದನು; ಕಟ್ಟಿಕೊಳೆ ಮಷ್ಟು ||ಮುಟ್ಟಿ ಮುಟ್ಟದವೋಲುಪಾಯದಿಂ ನೋಡದನು |ಗಟ್ಟಿ ಪುರುಳೇನಲ್ಲ - ಮಂಕುತಿಮ್ಮ ||
ನೂರಾರು ಸರಕುಗಳು ಜೀವಿತದ ಸಂತೆಯಲಿ |ಊರಿನವು; ಕೇರಿಯವು; ಮನೆಯಾತ್ಮವದವು ||ಬೇರೆ ಬೇರೆ ಪುರುಳ್ಗೆ ಬೇರೆ ನೆಲೆ; ಬೇರೆ ಬೆಲೆ |ತಾರತಮ್ಯವೆ ತತ್ತ್ವ - ಮಂಕುತಿಮ್ಮ ||
ಬೆರಳುಗಳ ನೋಡವುಗಳೊಂದರಂತೊಂದಿಲ್ಲ |ಕರಧರ್ಮಕುಚಿತವಾ ಹೆಚ್ಚು ಕಡಮೆಗಳು ||ಪುರುಳ ಪಿಡಿವುವೆ ಬೆರಳ್ಗಳೆಲ್ಲಮೊಂದುದ್ದವಿರೆ? |ಸರಿಯಹುದು ಕಾರ್ಯದಲಿ - ಮಂಕುತಿಮ್ಮ ||
ಸೃಷ್ಟಿಕಥೆ ಕಟ್ಟುಕಥೆ; ವಿಲಯಕಥೆ ಬರಿಯ ಕಥೆ |ಹುಟ್ಟುಸಾವುಗಳೊಂದೆ ಪುರುಳಿನೆರಡು ದಶೆ ||ನಿತ್ಯಪರಿವರ್ತನೆಯೆ ಚೈತನ್ಯನರ್ತನೆಯೆ |ಸತ್ಯ ಜಗದಲಿ ಕಾಣೊ - ಮಂಕುತಿಮ್ಮ ||