ಒಟ್ಟು 4 ಕಡೆಗಳಲ್ಲಿ , 1 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಜೀವನೋದ್ಯಮವೆಲ್ಲ ತೋಟದುದ್ಯೋಗವೆನು |ಭಾವಬುದ್ಧಿಗಳ ಕೃಷಿಯಿಂದೊಗೆದ ಫಲದಿಂ ||ತೀವುತಿರೆ ನಗೆ ಹೊಳಪು ಮೊಗಮೊಗದೊಳಂ ಜಗದಿ |ಸೇವೆಯದು ಬೊಮ್ಮಂಗೆ - ಮಂಕುತಿಮ್ಮ ||
ಧರೆ ಸಸ್ಯಫಲದಿ ಜೀವಿಗೆ ಪುಷ್ಟಿಯಿತ್ತೊಡೇಂ? |ಮರಳಿ ತಾಂ ಪಡೆಯಳೇನ್ ಅವನಿನರ್ಧವನು? ||ಧರಣಿಗೀ ನಮ್ಮೊಡಲು ಹುಯ್ಗಡುಬು ತಪ್ಪಲೆಯೊ! |ಪರಮೇಷ್ಠಿ ಯುಕ್ತಿಯದು - ಮಂಕುತಿಮ್ಮ ||
ಬಿತ್ತ ಮಳೆಗಲವೋಲು ಯತ್ನ ದೈವಿಕ ನಮಗೆ |ಯುಕ್ತದೊಳಗೆರಡುಮನುವಾಗೆ ಬೆಳೆ ಹುಲುಸು ||ಯತ್ನ ಬಿಟ್ಟರೆ ಲೋಪ; ದೈವ ತಾಂ ಬಿಡೆ ತಾಪ |ಗೊತ್ತಿಲ್ಲ ಫಲದ ಬಗೆ - ಮಂಕುತಿಮ್ಮ ||
ಸಿರಿದರಿದ್ರತೆಗಳ್ಗೆ ಫಲದೊಳಂತರ ಕಿರಿದು |ಸರಿತಪ್ಪುಗಳಿಗಂತು; ಜಾಣ್ ಬೆಪ್ಪುಗಳ್ಗಂ ||ಮರಣವೆಲ್ಲವನೊಂದೆ ತೆರದಿ ಮುಸುಕುವುದೆಂದೊ |ಪರವೆಯೆಂತಾದೊಡೇಂ? - ಮಂಕುತಿಮ್ಮ ||