ಕಗ್ಗ ಸಂಚಯ alpha
  • ಡಿ.ವಿ.ಜಿ
  • ಕಗ್ಗ
  • ಸಂಶೋಧನೆ
  • ಪದಕೋಶ
  • ಸಂಪರ್ಕಿಸಿ
  • ನಮ್ಮ ಬಗ್ಗೆ
ಇದರಂತೆ : ಇದನ್ನು :

ಒಟ್ಟು 7 ಕಡೆಗಳಲ್ಲಿ , 1 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಳೆವರಾರ್ ಪೆಣ್ಗಂಡುಗಳನೆಳೆವ ನೂಲುಗಳ? |ಕೆಳೆಪಗೆಗಳೆಲ್ಲವಾಳದಲಿ ಬಲು ತೊಡಕು ||ಇಳೆಯ ಋಣಗಳ ಲೆಕ್ಕವಿಹುದು ವಿಧಿಯಕ್ಕರದಿ |ತಿಳಿಯಗೊಡನದ ನಮಗೆ - ಮಂಕುತಿಮ್ಮ ||
--------------
ಡಾ. ಡಿ.ವಿ.ಗುಂಡಪ್ಪ

ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |ಜವರಾಯ ಸಮವರ್ತಿ - ಮಂಕುತಿಮ್ಮ ||

ಬಲುಹಳೆಯ ಲೋಕವಿದು; ಬಲುಪುರಾತನಲೋಕ |ಬೆಳೆದಿರ್ಪುದಿದು ಕೋಟಿರಸಗಳನು ಪೀರ್ದು ||ಸುಲಭವಲ್ಲಿದರ ಸ್ವಭಾವವನು ಮಾರ್ಪಡಿಸೆ |ಸಲದಾತುರತೆಯದಕೆ - ಮಂಕುತಿಮ್ಮ ||

ಮಂದಾಕ್ಷಿ ನಮಗಿಹುದು ಬಲುದೂರ ಸಾಗದದು |ಸಂದೆ ಮಸಕಿನೊಳಿಹುದು ಜೀವನದ ಪಥವು ||ಒಂದುಮೆಟುಕದು ಕೈಗೆ; ಏನೊ ಕಣ್ಕೆಣಕುವುದು |ಸಂದಿಯವೆ ನಮ್ಮ ಗತಿ! - ಮಂಕುತಿಮ್ಮ ||

ಯಮನಿಗೇಕಪಕೀರ್ತಿ? ನರರು ಬಲು ಕರುಣಿಗಳೆ? |ಮಮತೆಯಿನೊ ರೋಷದಿನೊ ಹಾಸ್ಯದಿನೊ ಹೇಗೋ ||ನಿಮಿಷನಿಮಿಷಮುಮೊರ್ವನಿನ್ನೊರ್ವನನು ತಿಕ್ಕಿ |ಸಮೆಯಿಸುವನಾಯುವನು - ಮಂಕುತಿಮ್ಮ ||

ಸಿರಿ ಸೊಬಗುಗಳ ಬೆದಕು; ಕೆಳೆ ಬಲುಮೆಗಳ ಬೆದಕು |ಪರಬೊಮ್ಮ ನಾಟಕದ ವೇಷಚೇಷ್ಟೆಗಳು ||ಅರಸುತಿಹ ಜೀವ ನಾಯಕನು; ನಾಯಕಿಯವನ |ಕೆರಳಿಸುವ ಮೋಹರುಚಿ - ಮಂಕುತಿಮ್ಮ ||

©2014 - 2020 ಕನ್ನಡ ಸಂಚಯ | ಸಾಹಿತ್ಯ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ