ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಜಾನಪದಗಳು ರಾಜ್ಯಸಾಮ್ರಾಜ್ಯಗಳು ಗುರು |ಸ್ಥಾನಗಳು ಧರ್ಮಗಳು ಭಾಷೆ ವಿದ್ಯೆಗಳು ||ಕಾಣಿಸದೆ ಸಾಗಿಹವು ಕಾಲಪ್ರವಾಹದಲಿ |ಮಾನವತೆ ನಿಂತಿಹುದು - ಮಂಕುತಿಮ್ಮ ||
ನರನರೀ ಚಿತ್ರಗಳು; ನಾಟಕದ ಪಾತ್ರಗಳು |ಪರಿಪರಿಯ ವೇಷಗಳು; ವಿವಿಧ ಭಾಷೆಗಳು ||ಬರುತಿಹುವು; ಬೆರಗೆನಿಸಿ; ಮೆರೆಯುವುವು; ತೆರಳುವುವು |ಮೆರೆವಣಿಗೆಯೋ ಲೋಕ - ಮಂಕುತಿಮ್ಮ ||
ನರಭಾಷೆ ಬಣ್ಣಿಪುದೆ ಪರಸತ್ತ್ವರೂಪವನು? |ಅರಿಯದದು ನಮ್ಮೆದೆಯ ಭಾವಗಳನೊರೆಯೆ ||ಪರಮಾನುಭವಗಳುಲಿಯನುಭವಿಗಳೊಳಕಿವಿಗೆ |ಒರಟುಯಾನವೊ ಭಾಷೆ - ಮಂಕುತಿಮ್ಮ ||
ಹೃದಯಕೊಪ್ಪುವ ಭಾಷೆ ರಾಗಲಯ ವಿಸ್ತಾರ |ಪದ ಚರ್ಚೆ ಮತಿವಿಚಾರಕೆ ತಕ್ಕ ಭಾಷೆ ||ಹೃದಯ ಮತಿ ಸತಿಪತಿಗಳಂತಿರಲು ಯುಕ್ತವದು |ಬದುಕು ರಸತರ್ಕೈಕ್ಯ - ಮಂಕುತಿಮ್ಮ ||