ಒಟ್ಟು 9 ಕಡೆಗಳಲ್ಲಿ , 1 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅರಿ ಮಿತ್ರ ಸತಿ ಪುತ್ರ ಬಂಧುಬಳಗವದೆಲ್ಲ |ಕರುಮದವತಾರಗಳೊ; ಋಣಲತೆಯ ಚಿಗುರೋ ||ಕುರಿಯನಾಗಿಸಿ ನಿನ್ನ ಕಾಪಿಡುವ ಸಂಸಾರ |ವುರಿಮಾರಿಯಾದೀತೊ - ಮಂಕುತಿಮ್ಮ ||
ಇಂಗಿತಜ್ಞಾನವಿಲ್ಲದ ಬಂಧುಪರಿವಾರ |ಹಂಗಿಸುವ ಛಲವುಳ್ಳ ಸತಿಪುತ್ರಸಖರು ||ಬಂಗಾರದಸಿ ಚುಚ್ಚೆ ಸಿಂಗರದ ಬೊಟ್ಟೆನುವ |ಮಂಗಬುದ್ಧಿಯ ಜನರು - ಮಂಕುತಿಮ್ಮ ||
ಕೈಕಯಿಯವೊಲು ಮಾತೆ; ಸತ್ಯಭಾಮೆವೊಲು ಸತಿ |ಸಾಕಿ ಸಂತಸವೆರೆಯೆ ಸಂಸಾರ ಲೀಲೆ ||ಬೇಕು ಮತ್ಸರ ಮಮತೆ ಮೋಹಂಗಳಾವೇಶ |ಲೋಕನಾಟಕಕಾಗಿ - ಮಂಕುತಿಮ್ಮ ||
ಗಗನ ತಲೆನವಿರಾಗೆ ಪೆರೆತಾರೆ ಹೂವಾಗೆ |ಜಗವೆಲ್ಲ ವಪುವಾಗೆ ಮಾಯೆ ಸತಿಯಾಗೆ ||ನಗುನಗುವ ಬೊಬ್ಬಿಡುವ ಜೀವತಾಂಡವರಸಿಕ |ಭಗವಂತ ಶಿವರುದ್ರ - ಮಂಕುತಿಮ್ಮ ||
ಜಡವೇನು? ಜೀವವೇಂ? ಚೈತನ್ಯ ನಿದ್ರಿಸಿರು |ವೆಡೆಯೆಲ್ಲ ಜಡಲೋಕ ಕಲ್ಲು ಕಡ್ಡಿ ಕಸ ||ಅಡಗಿರ್ಪ ಚೈತನ್ಯವೆಚ್ಚರಲು ಜಂತು ಜಗ |ಜಡವೆ ಜೀವದ ವಸತಿ - ಮಂಕುತಿಮ್ಮ ||
ಬಹುಜನಂ ಕೈಮುಗಿದ ತೀರ್ಥದೊಳ್ ಕ್ಷೇತ್ರದೊಳ್ |ಮಹಿಮೆಯಲ್ಲೇನೆಂದು ಸಂಶಯಿಸಬೇಡ ||ವಿಹಿತಗೈದವರಾರು ವಸತಿಯಂ ದೈವಕ್ಕೆ? |ಮಹಿಮೆ ಮನಸೋತೆಡೆಯೊ - ಮಂಕುತಿಮ್ಮ ||
ಮಾತೆವೊಲೊ ಪಿತನವೊಲೊ ಪತಿಯವೊಲೊ ಸತಿಯವೊಲೊ |ಭ್ರಾತಸುತಸಖರವೊಲೊ ಪಾತ್ರವೊಂದಕೆ ತಾಂ ||ಕಾತರಿಸುತಿಹುದು ತನ್ನೆಲ್ಲವನು ಮುಡುಪುಕುಡೆ |ಪ್ರೀತಿಯಾ ಹುಚ್ಚು ಚಟ - ಮಂಕುತಿಮ್ಮ ||
ಮೃತನ ಸಂಸಾರಕಥೆ ಶವವಾಹಕರಿಗೇಕೆ? |ಸತಿಯು ಗೋಳಿಡಲಿ; ಸಾಲಿಗನು ಬೊಬ್ಬಿಡಲಿ ||ಜಿತಮನದಿ ಚಿತಿಗಟ್ಟಿ ಕೊಂಡೊಯ್ಯುತಿಹರವರು |ಧೃತಿಯ ತಳೆ ನೀನಂತು - ಮಂಕುತಿಮ್ಮ ||
ಹೃದಯಕೊಪ್ಪುವ ಭಾಷೆ ರಾಗಲಯ ವಿಸ್ತಾರ |ಪದ ಚರ್ಚೆ ಮತಿವಿಚಾರಕೆ ತಕ್ಕ ಭಾಷೆ ||ಹೃದಯ ಮತಿ ಸತಿಪತಿಗಳಂತಿರಲು ಯುಕ್ತವದು |ಬದುಕು ರಸತರ್ಕೈಕ್ಯ - ಮಂಕುತಿಮ್ಮ ||