ಕಗ್ಗ ಸಂಚಯ alpha
  • ಡಿ.ವಿ.ಜಿ
  • ಕಗ್ಗ
  • ಸಂಶೋಧನೆ
  • ಪದಕೋಶ
  • ಸಂಪರ್ಕಿಸಿ
  • ನಮ್ಮ ಬಗ್ಗೆ
ಇದರಂತೆ : ಇದನ್ನು :

ಒಟ್ಟು 7 ಕಡೆಗಳಲ್ಲಿ , 1 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಳಕೆಂದು; ಹುಳುಕೆಂದು; ಹೇಸಿಗೆಯ ಹುಳುವೆಂದು |ಇಳೆಯೊಳಾವುದರೊಳಮಸಹ್ಯಪಡಬೇಡ ||ಬೆಲೆಯುಂಟು ಕೊಳೆಗಮೀ ಜೀವಸಾಮಗ್ರಿಯಲಿ |ಕೊಳೆ ಶುಚಿಖ್ಯಾಪಕವೊ - ಮಂಕುತಿಮ್ಮ ||
--------------
ಡಾ. ಡಿ.ವಿ.ಗುಂಡಪ್ಪ

ದಾರಿಗುರಿಗಳ ಗೊತ್ತು ಕಗೆಗುಂಟೇನಯ್ಯಾ? |ಆರ ಮನೆ ಸಂಡಿಗೆಯೊ; ಚುಂಡಿಲಿಯೊ; ಹುಳುವೋ ||ಆರ ಪಿಂಡವೊ; ಏನೊ; ಎಂತೊ; ಆ ಬಾಳ ಗತಿ! |ಮೀರಿದವನೇಂ ನೀನು? - ಮಂಕುತಿಮ್ಮ ||

ಪುಲಿ ಸಿಂಗದುಚ್ಛ್ವಾಸ; ಹಸು ಹುಲ್ಲೆ ಹಯದುಸಿರು |ಹುಳು ಹಾವಿಲಿಯ ಸುಯ್ಲು; ಹಕ್ಕಿ ಹದ್ದುಯ್ಲು ||ಕಲೆತಿರ್ಪುವೀಯೆಲ್ಲ ನಾಮುಸಿರ್ವೆಲರಿನಲಿ |ಕಲಬೆರಕೆ ಜಗದುಸಿರು - ಮಂಕುತಿಮ್ಮ ||

ಪೊಡೆಯುಣಿಸ ಮಿಗಹಕ್ಕಿಹುಳುಗಳಂದದಿ ನರನ |ತಡಕುವನು; ತನ್ನಾತ್ಮದುಣಿಸ ಮರೆಯುವನು ||ಒಡಲಿನಬ್ಬರವೇನು? ಆತುಮದ ನಾಣ್ಚೇನು? |ಪೊಡವಿಗಿದೆ ದುಮ್ಮಾನ - ಮಂಕುತಿಮ್ಮ ||

ವಿಷಯಸನ್ನಿಧಿಗಿಂತ ಮಸಣಸನ್ನಿಧಿ ಲೇಸು |ವಿಷದೂಟಕಿಂತುಪೋಷಿತವೆ ಲೇಸಲ್ತೆ? ||ತೃಷೆ ಕನಲೆ; ಜೀವ ಬಿಸಿಬಾಣಲಿಗೆ ಬಿದ್ದ ಹುಳು |ಶಿಶು ಪಿಶಾಚಿಯ ಕೈಗೆ - ಮಂಕುತಿಮ್ಮ ||

ಹುಳು ಹುಟ್ಟಿ ಸಾಯುತಿರೆ; ನೆಲ ಸವೆದು ಕರಗುತಿರೆ |ಕಡಲೊಳೆತ್ತಲೊ ಹೊಸ ದ್ವೀಪವೇಳುವುದು ||ಕಳೆಯುತೊಂದಿರಲಿಲ್ಲಿ; ಬೆಳೆವುದಿನ್ನೊಂದೆಲ್ಲೊ |ಅಳಿವಿಲ್ಲ ವಿಶ್ವಕ್ಕೆ - ಮಂಕುತಿಮ್ಮ ||

©2014 - 2020 ಕನ್ನಡ ಸಂಚಯ | ಸಾಹಿತ್ಯ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ