ಕಗ್ಗ ಸಂಚಯ alpha
  • ಡಿ.ವಿ.ಜಿ
  • ಕಗ್ಗ
  • ಸಂಶೋಧನೆ
  • ಪದಕೋಶ
  • ಸಂಪರ್ಕಿಸಿ
  • ನಮ್ಮ ಬಗ್ಗೆ
ಇದರಂತೆ : ಇದನ್ನು :

ಪ್ರಾರಂಭ ಪದದ ಹುಡುಕು

ಅ (50) ಆ (31) ಇ (20) ಈ (2) ಉ (9) ಊ (0) ಋ (4) ೠ (0) ಎ (35) ಏ (13) ಐ (1) ಒ (24) ಓ (2) ಔ (1) ಅಂ (8) ಅಃ (8) ಕ (71) ಖ (1) ಗ (24) ಘ (2) ಙ (0) ಚ (9) ಛ (0) ಜ (36) ಝ (0) ಞ (0) ಟ (1) ಠ (0) ಡ (0) ಢ (0) ಣ (0) ತ (61) ಥ (0) ದ (34) ಧ (17) ನ (68) ಪ (59) ಫ (2) ಬ (62) ಭ (12) ಮ (77) ಯ (5) ರ (17) ಱ (0) ಲ (7) ವ (27) ಶ (20) ಷ (0) ಸ (86) ಹ (55) ಳ (0)
ನೆನೆನೆನೆದು ಗಹನವನು; ಜೀವನರಹಸ್ಯವನು |ಮನವ ಬಳಲಿಸಿ ಸೋಲಿಸಿರುವ ತತ್ತ್ವವನು ||ಮನನದೇಕಾಂತದಲಿ ಮೌನದ ಧ್ಯಾನದಲಿ |ಮಣಿಮಣಿದು ಕೈಮುಗಿಯೊ - ಮಂಕುತಿಮ್ಮ ||
--------------
ಡಾ. ಡಿ.ವಿ.ಗುಂಡಪ್ಪ

ನೆರಳನಿನಿತನು ಕೊಡುವ; ದಣಿವನಿನಿತನು ಕಳೆವ |ತಿರೆಯ ಪಯಣದ ಹೊರೆಯನಿನಿತು ಸುಳುವೆನಿಪಾ ||ತರುವಾಗಿ ಮನೆಯೊಳಗೊ ಹೊರಗೊ ನೀಂ ಬೆಳೆಯುತಿರೆ |ಪರಮಧರ್ಮವದೆಲವೊ - ಮಂಕುತಿಮ್ಮ ||

ನೆಲದ ಬೇಸಾಯ ತಾನೊಳ್ಳಿತಾಗಿರೆ ನಿನಗೆ |ಫಲವದೆಂತಹುದೆಂಬ ಶಂಕೆಗೆಡೆಯುಂಟೆ? ||ಒಳಿತರೊಳೆ ನೀಂ ಬಾಳು; ಪರವದೆಂತಿರ್ಡೊಡೇಂ? |ಇಳೆಯೆ ಬಾಗಿಲು ಪರಕೆ - ಮಂಕುತಿಮ್ಮ ||

ನೆಲವೊಂದೆ; ಹೊಲ ಗದ್ದೆ ತೋಟ ಮರಳೆರೆ ಬೇರೆ |ಜಲವೊಂದೆ; ಸಿಹಿಯುಪ್ಪು ಜವುಗೂಟೆ ಬೇರೆ ||ಕುಲವೊಂದರೊಳೆ ಸೋದರವ್ಯಕ್ತಿಗುಣ ಬೇರೆ |ಹಲವುಮೊಂದುಂ ಸಾಜ - ಮಂಕುತಿಮ್ಮ ||

ನೇತ್ರಯುಗಳಂ ಪಿಡಿಗುಮೊಂದು ಲಕ್ಷ್ಯವ ಕೂಡಿ |ಹಸ್ತಯುಗ ಸಾಧಿಪುದು ಮನದರ್ಥವೊಂದನ್ ||ದ್ವೈತದಿಂದದ್ವೈತವದ್ವೈತದೊಳ್ ದ್ವೈತ |ಚೈತನ್ಯಲೀಲೆಯಿದು - ಮಂಕುತಿಮ್ಮ ||

ನೈರಾಶ್ಯನಿರತಂಗೆ ದೇವತೆಗಳಿಂದೇನು? |ವೈರಾಗ್ಯಪಥಿಕಂಗೆ ನಷ್ಟಭಯವೇನು? ||ಪಾರಂಗತಂಗಂತರಾಳ ದೂರಗಳೇನು? |ಸ್ವೈರಪಥವಾತನದು - ಮಂಕುತಿಮ್ಮ ||

ನೋಡುನೋಡುತ ಲೋಕಸಹವಾಸ ಸಾಕಹುದು |ಬಾಡುತಿಹ ಹೂಮಾಲೆ; ಗೂಢವಿಹ ಕಜ್ಜಿ ||ತೋಡದಿರು ಬಾಳ್ವೆಯಾಳವನು; ಮೇಲ್ಮೇಲೆ ನೀ |ನೋಡಾಡು ಹಗುರದಿಂ - ಮಂಕುತಿಮ್ಮ ||

ನ್ಯಾಯಾಧಿಪತಿ ತನ್ನ ಮತಿ ಮನಸುಗಳನೆಲ್ಲ |ಸ್ವೀಯಲಾಭಸ್ಮರಣೆಯುಳಿದು ವಿವದಿಗಳಾ ||ದಾಯನಿರ್ಣಯಕೆ ಯೋಜಿಸುವಂತೆ; ನೀಂ ಜಗದ |ಶ್ರೇಯಸ್ಸಿಗುಜ್ಜುಗಿಸು - ಮಂಕುತಿಮ್ಮ ||

ಹಿಂದೆ 1 2 3 4 5 ಮುಂದೆ
©2014 - 2020 ಕನ್ನಡ ಸಂಚಯ | ಸಾಹಿತ್ಯ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ